———————————ಅಭಿವೃದ್ಧಿ ಮರಿಚೀಕೆ: ಜೆಡಿಎಸ್ ನಿಂದ ಸತ್ಯಾಗ್ರಹ, ಹೋರಾಟ

ಪಾವಗಡ: ನಗರದಲ್ಲಿ ಸ್ವಚ್ಛತೆ ಮತ್ತು ಚರಂಡಿ ವ್ಯವಸ್ಥೆ ಹಾಗೂ ಮೂಲ ಸೌಕರ್ಯಗಳು ಕಾಣೆಯಾಗಿದೆ ನಾವು ಕಳೆದ ತಿಂಗಳು ಸತತವಾಗಿ 7 ದಿನಗಳ ಕಾಲ ಪುರಸಭೆಯ ನಗರದ ಸಾರ್ವಜನಿಕರಿಗೆ ಮೂಲ ಭೂತ ಸೌಕರ್ಯಗಳು ಒದಗಿಸಲು ವಿಫಲವಾದ ಕಾರಣ ಜೆಡಿಎಸ್ ಪಕ್ಷದ ವತಿಯಿಂದ ಅನಿರ್ದಿಷ್ಟ ಅವಧಿ ಸತ್ಯಾಗ್ರಹ ಪುರಸಭೆ ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿತ್ತು.
ಮತ್ತು ಮೊನ್ನೆ ಕಳೆದ ವಾರ ಪುರಸಭೆಗೆ ಮುತ್ತಿಗೆ ಹಾಕಿ ಕನಿಷ್ಠ ಮೂಲ ಭೂತ ಸೌಕರ್ಯಗಳನ್ನು ಪಾವಗಡ ಜನತೆಗೆ ಒದಗಿಸಿ ಎಂದು ಮನವಿ ಮಾಡಿದರೂ ಪುರಸಭೆ ಕಣ್ಣಿದ್ದು ಕುರಡರ ರೀತಿ ವರ್ತಿಸುತ್ತಿದೆ, ನಗರದಲ್ಲಿ ಸರಿಯಾಗಿ ರಸ್ತೆಗಳಿಲ್ಲ, ರಸ್ತೆಗಳನ್ನು ಸರಿಪಡಿಸಿ ಎಂದರು ಯಾವುದೇ ಪ್ರಯೋಜನೆಯಿಲ್ಲ, ನಗರದ 23ನೇ ವಾರ್ಡಿನ ಶಾರದಾ ವಿದ್ಯಾ ಪೀಠಕ್ಕೆ ಶಾಲೆಗೆ ಹೋಗುವ ರಸ್ತೆ ಹಾಳಾಗಿದ್ದು, ರಸ್ತೆಯ ಪಕ್ಕದಲ್ಲಿ ತಿಪ್ಪೆಗುಂಡಿಗಳಿದ್ದು ಅವು ಕಸದಿಂದ ಕೂಡಿ ದುರ್ವಾಸನೆ ಬರುತ್ತಿದೆ, ಸದರಿ ಶಾಲೆಗೆ ಸುಮಾರು ನೂರಾರು ಶಾಲೆಯ ಮಕ್ಕಳು ಇದೆ ರಸ್ತೆಯಲ್ಲಿ ಓಡಾಡುತ್ತಾರೆ, ಸರಿಯಾದ ರಸ್ತೆಯಿಲ್ಲ, ಸ್ವಚ್ಛತೆಯಿಲ್ಲ, ಸ್ವಚ್ಛತೆಯ ಬಗ್ಗೆ ಪುರಸಭೆಗೆ ಶಾಲೆಯ ಮಕ್ಕಳ ಮತ್ತು ಪೋಷಕರು ಶಾಪವನ್ನು ಹಾಕುತ್ತಿದ್ದರು.ಹಾಗೂ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲದೆ ಕಾರಣ ಸೊಳ್ಳೆಗಳ ಕಾಟದಿಂದ ವಿಷಪೂರ್ವದ ಜ್ವರಗಳಿಂದ ಪಟ್ಟಣದಲ್ಲಿ ಸಾರ್ವಜನಿಕರು ಬಳಗುತ್ತಾ ಇದ್ದಾರೆ. ಸಂಬಂಧಪಟ್ಟ ಪುರಸಭೆ ಕೈಕಟ್ಟಿ ಕುಳಿತಿದೆ,
ಸ್ಥಳೀಯ ಶಾಸಕರು ಮತ್ತು ಪುರಸಭೆಯ ಆಡಳಿತ ಮಂಡಳಿ ಪಾವಗಡ ಪಟ್ಟಣದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಎಂದು ಆರೋಪಿಸಿದ ಪಟ್ಟಣದಲ್ಲಿರುವ ಜೆಡಿಎಸ್ ಪಕ್ಷದ ಮುಖಂಡ ಕಾವಲಗೆರೆ ರಾಮಾಂಜಿ ಆರೋಪಿಸಿದ್ದಾರೆ.
ವರದಿ: ಶಿವಾನಂದ ಪಾವಗಡ




