Ad imageAd image

ಧರ್ಮದಲ್ಲಿ ಹಿಂದು – ಜಾತಿಯಲ್ಲಿ ಗೊಂಡ ಎಂದು ನಮೂದಿಸಿ ಒಂದೇ ಧ್ವನಿಯಲ್ಲಿ ಸಮಾಜದ ನಿರ್ಧಾರ

Bharath Vaibhav
ಧರ್ಮದಲ್ಲಿ ಹಿಂದು – ಜಾತಿಯಲ್ಲಿ ಗೊಂಡ ಎಂದು ನಮೂದಿಸಿ ಒಂದೇ ಧ್ವನಿಯಲ್ಲಿ ಸಮಾಜದ ನಿರ್ಧಾರ
WhatsApp Group Join Now
Telegram Group Join Now

ಭಾಲ್ಕಿ: ಸೆಪ್ಟೆಂಬರ್ 22 ರಿಂದ ಪ್ರಾರಂಭ ವಾಗುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಭಾಲ್ಕಿ ನಗರದ ಕನಕ ಭವನದಲ್ಲಿ ಗೊಂಡ ನೌಕರರ ಸಂಘದ ವತಿಯಿಂದ ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ಮಹತ್ವದ ಸಭೆ ಜರುಗಿತು.

ಸಭೆಯಲ್ಲಿ ಮಾಜಿ ಸಭಾಪತಿ ರಘುನಾಥರಾವ ಮಲಕಾಪುರೆ ಅವರು ಮಾತನಾಡಿ ಸಮಾಜದ ಏಕತೆ ಮತ್ತು ಹಕ್ಕುಗಳ ಭದ್ರತೆಗೆ ಮಹತ್ವದ ಹೆಜ್ಜೆಯಾಗಿದೆ. ಮುಂಬರುವ ಸಮೀಕ್ಷೆಯಲ್ಲಿ ಎಲ್ಲರೂ ಒಂದೇ ರೀತಿಯ ವಿವರ ನೀಡುವುದರ ಮೂಲಕ ಸಮಾಜದ ಹಕ್ಕು–ಅವಕಾಶಗಳನ್ನು ಬಲಪಡಿಸಲು ಒಗ್ಗಟ್ಟಿನಿಂದ ಬೀದರ್ ಜಿಲ್ಲೆಯ ಗೊಂಡ ಸಮಾಜದ ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಒಂದೇ ರೀತಿಯ ವಿವರ ನಮೂದಿಸಿ,ನಮ್ಮ ಹಕ್ಕು–ಅವಕಾಶಗಳನ್ನು ಬಲಪಡಿಸಲು ಸಹಕರಿಸಬೇಕು” ಎಂದರು.

ಹಿರಿಯ ಮುಖಂಡ ಅಮೃತರಾವ ಚಿಮಕೊಡೆ ಮಾತನಾಡಿ ನಾವೆಲ್ಲರೂ ಗೊಂಡ ಜಾತಿಯವರೇ ಆಗಿದ್ದೇವೆ. ಆದ್ದರಿಂದ ಯಾವುದೇ ಗೊಂದಲವಿಲ್ಲದೆ ಸಮಾಜದ ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯ ಕಾಲಂನಲ್ಲಿ ಗೊಂಡ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಆದ್ದರಿಂದ ಎಲ್ಲರೂ ಒಂದೇ ರೀತಿಯಲ್ಲಿ ಗೊಂಡ ಎಂದೇ ನಮೂದಿಸುವುದು ಅತ್ಯಂತ ಅಗತ್ಯ, ಎಂದು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಿದರು.

ಪೂಜ್ಯ ಮಾಳಪ್ಪ ಮುತ್ಯಾ ಉಚ್ಚಾ, ಎಂ.ಎಸ್. ಕಟಗಿ,ನಿರಂಜಪ್ಪಾ ಪಾತ್ರೆ, ಕೆ. ಡಿ ಕಣೇಶ್ , ಶಿವಾಜಿ ತೋರಣೆ, ಮಾಳಪ್ಪ ಅಡಸಾರೆ, ಬಾಲಾಜಿ ಖೇಡಕರ್, ಸೇರಿದಂತೆ ಇನಿತರರು ಮುಖಂಡರು ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವೆಂಕಟರಾವ ಬಿರಾದರ,ಭಾಲ್ಕೆಶ್ವರ ಹುಡುಗೆ, ಶಿವರಾಜ ಮಲ್ಲೇಶಿ, ಶಿವಶರಣಪ್ಪ ಛತ್ರೆತುಕಾರಾಮ ಕರಾಟೆ, ಅಶೋಕ ಬರ್ಮಾ, ರವೀಂದ್ರ ಕಣಜೆ,ತುಳಸಿರಾಮ ಉಚ್ಚಾ,ಶಿವಾಜಿ ಮೆತ್ರೆ,ಪದ್ಮಕರ ಮಲ್ಲೇಶಿ, ಶಿವರಾಜ ಬಿರಾದರ,ವೆಂಕಟರಾವ ಬಿರಾದರ,ಶಿವಾಜಿ ತೋರಣೆ ಹಾಗೂ ಅನೇಕ ಹಿರಿಯ ಮುಖಂಡರು, ಯುವಕರು ಮತ್ತು ನೌಕರರು ಉಪಸ್ಥಿತರಿದ್ದರು. ವೆಂಕಟರಾವ ಮಲಗೊಂಡಾ ಸ್ವಾಗತಿಸಿದರು.ಹಣಮಶೆಟ್ಟಿ ಸಿದ್ದೇಶ್ವರೆ ವಂದಿಸಿದರು. ಚಂದ್ರಕಾಂತ ತಳವಾಡೆ ನಿರೂಪಿಸಿದರು.

ವರದಿ: ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!