Ad imageAd image

ಜಯಮೃತ್ಯುಂಜಯ ಶ್ರೀ ಉಚ್ಚಾಟನೆ ಬೆನ್ನಲ್ಲೆ ಮಠಕ್ಕೆ ಬೀಗ

Bharath Vaibhav
ಜಯಮೃತ್ಯುಂಜಯ ಶ್ರೀ ಉಚ್ಚಾಟನೆ ಬೆನ್ನಲ್ಲೆ ಮಠಕ್ಕೆ ಬೀಗ
WhatsApp Group Join Now
Telegram Group Join Now

ಬಾಗಲಕೋಟೆ:  ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಚಾಟನೆ ಮಾಡಿದ ಬೆನ್ನಲ್ಲೆ ಮಠಕ್ಕೆ ಬೀಗ ಜಡಿಯಲಾಗಿದೆ.

ಕಳೆದ ಹಲವು ದಿನಗಳಿಂದ ಈ ವಿಚಾರದಲ್ಲಿ ರಾಜಕೀಯ ಜಟಾಪಟಿ ಜೋರಾಗಿತ್ತು.ಈ ವಿಚಾರಕ್ಕೆ ಸಂಬಂಧಪಟ್ಟಂತೆ ಭಾನುವಾರ ಪಂಚಮಸಾಲಿ ಟ್ರಸ್ಟ್ ನ ಕಾರ್ಯಕಾರಿಣಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿತ್ತು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಇನ್ಮುಂದೆ ಅವರಿಗೆ ಹಾಗೂ ಈ ಪೀಠಕ್ಕೂ ಯಾವುದೇ ಸಂಬಂಧವಿಲ್ಲ.. ಅವರಿಗೆ ಸ್ವಾಭಿಮಾನ, ಸಂಸ್ಕಾರವಿದ್ದರೆ ಈ ಮಠಕ್ಕೆ ಬಾರಬಾರದು ಎಂದು ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ತಿಳಿಸಿದ್ದಾರೆ.

ಅಲ್ಲದೇ, ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಿಡಿ ಎಲ್ಲೆಲ್ಲಿ ಹೋಗಿವೆ ಅವೆಲ್ಲವನ್ನೂ ಬೆಳಕಿಗೆ ತರುತ್ತೇವೆ. ಅಷ್ಟೇ ಅಲ್ಲ, ಸ್ವಾಮೀಜಿ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಯರ್ಮ್ಬ ದಾಖಲೆಗಳನ್ನು ಹುಡುಕುತ್ತೇವೆ, ಸಮಯ ಬಂದಾಗ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡುತ್ತಿದ್ದಂತೆ ಮಠಕ್ಕೆ ಬೀಗ ಹಾಕಲಾಗಿದೆ. ಪೀಠದೊಳಗಿನ ವಿದ್ಯುತ್ ದ್ವೀಪ ಮಾತ್ರ ಆನ್ ಆಗಿವೆ.

ಪೀಠದ ಕಡೆ ಯಾರೂ ಸುಳಿದಿಲ್ಲ. ಪೀಠ ಲಾಕ್ ಮಾಡಿಕೊಂಡು ಟಸ್ಟ್‌ ಸಿಬ್ಬಂದಿ ಹೋಗಿದ್ದಾ ರೆ.ಕಳೆದ ಹಲವು ದಿನಗಳಿಂದ ಈ ವಿಚಾರದಲ್ಲಿ ರಾಜಕೀಯ ಜಟಾಪಟಿ ಜೋರಾಗಿತ್ತು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಭಾನುವಾರ ಪಂಚಮಸಾಲಿ ಟ್ರಸ್ಟ್ ನ ಕಾರ್ಯಕಾರಿಣಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿತ್ತು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!