ಭಾಲ್ಕಿ : ಕೇಂದ್ರ ಸರ್ಕಾರ ಜಿ ಎಸ್ ಟಿ 02 ಜಾರಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಏಳಿಗೆಗಾಗಿ ಜಿ ಎಸ್ ಟಿ ಮೊತ್ತ ಕಡಿಮೆ ಮಾಡಿದ್ದು, ಹಾಗು ದಿನ ಉಪಯೋಗಿ ವಸ್ತುಗಳ ಮೇಲಿನ ಜಿ ಎಸ್ ಟಿ ಸಂಪೂರ್ಣವಾಗಿ ತೆಗೆದು ಹಾಕಿದ್ದಕ್ಕಾಗಿ, ಭಾಲ್ಕಿ ಪಟ್ಟಣದ ಗಾಂಧಿ ಚೌಕನಲ್ಲಿ ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ ರವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಭಾಲ್ಕಿ ಮಂಡಲದ ವತಿಯಿಂದ ಫಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರಿಗೆ ಹಾಗು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ ರವರು ಮೋದಿ ಜೀ ರವರು ಬಡ ಮತ್ತು ಮಧ್ಯಮ ವರ್ಗದ ಜನರ ಏಳಿಗೆಗಾಗಿ ಜಿ ಎಸ್ ಟಿ ಮೊತ್ತ ಈ ಮೊದಲು 28 % ಇದ್ದದ್ದು 18% ಕ್ಕೆ ಇಳಿಕೆ ಮಾಡಿದ್ದಾರೆ, 18%ಹಾಗು 12% ಇದ್ದದ್ದು 05% ಕ್ಕೆ ಇಳಿಕೆ ಮಾಡಿದ್ದಾರೆ, ಇನ್ನು ಕೆಲ ದಿನಬಳಕೆಯ ವಸ್ತುಗಳ ಮೇಲಿದ್ದ ಜಿ ಎಸ್ ಟಿ ಸಂಪೂರ್ಣವಾಗಿ ತೆಗೆದು ಹಾಕಿದ್ದಾರೆ, ಮೋದಿ ಜೀ ರವರು ಯಾವತ್ತು ಬಡವರ, ರೈತರ, ಮಹಿಳೆಯರ, ಯುವಕರ, ಸರ್ವ ಜನಾಂಗದ ಏಳಿಗೆಯ ಬಗ್ಗೆ ಹಾಗು ದೇಶದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿದ್ದಾರೆ, ಇಂತಹ ಪ್ರಧಾನಿ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯ ಎಂದು ನುಡಿದರು.
ಮಂಡಲ ಅಧ್ಯಕ್ಷರಾದ ವೀರಣ್ಣ ಕಾರಬಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂಧರ್ಭದಲ್ಲಿ ಮುಖಂಡರುಗಳಾದ ಗೋವಿಂದರಾವ್ ಬಿರಾದರ್, ಜೈ ಭೀಮ್ ಬಂಧು, ಚನ್ನಬಸವ ಬಳತೆ, ವೆಂಕಟ ಬಿರಾದಾರ್, ರವಿ ಕಣಜೆ, ಬಾಬುರಾವ್ ಧೂಪೆ, ಸುಭಾಷ್ ಬಿರಾದಾರ, ಸೂರಜ್ ಸಿಂಗ್ ರಾಜಪೂತ್, ಸಂಜೀವ್ ಸಿಂಧೆ, ಜಮೀಲ್ ಇನಾಮದಾರ, ಕಿರಣ್ ಖಂಡ್ರೆ, ಉತ್ತಮ್ ಪೂರಿ, ಸಿದ್ದು ಕಾಡಾದಿ, ಶಾಹುರಾಜ್ ಪವಾರ್, ಗೌಸೋದ್ದಿನ್ ಅಲ್ಲಿ, ಪಾಂಡುರಂಗ ಕನ್ಸೆ, ದೀಪಕ್ ಸಿಂಧೆ, ಜಗದೀಶ್ ಕನ್ನಾಳೆ , ಚಂದು ಪಾಟೀಲ್, ಸತೀಶ್ ನಾಯಕ, ಸತೀಶ ಅಷ್ಟುರೆ, ವೈಜಿನಾಥ ಕಾರ್ಡ್ಯಾಳ, ಗಣಪತಿ ಮಾಟೀ, ಸೇರಿದಂತೆ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ




