ಲಕ್ನೋ: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಎ, ತಂಡವು ಭಾರತ ಎ’ ವಿರುದ್ಧ ಇಲ್ಲಿ ನಡೆದ ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನ ಮೂರನೇ ಅವಧಿಯ ಆಟದಲ್ಲಿ 6 ವಿಕೆಟ್ ಗೆ 242 ರನ್ ಗಳಿಸಿತ್ತು.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ದಿನ ಭಾರತ ಎ, ತಂಡವು ಟಾಸ್ ಗೆದ್ದು ಮೊದಲು ಬೌಲ್ ಮಾಡಲು ತೀರ್ಮಾನಿಸಿತು. ಭಾರತ ಎ, ತಂಡದ ಪರವಾಗಿ ಮಾನವ ಸುತಾರ್ 57 ಕ್ಕೆ 3 ವಿಕೆಟ್ ಪಡೆದರು. ನ್ಯಾಥನ್ ಮ್ಯಾಕ್ಸವೇನಿ 74 ರನ್ ಗಳಿಸಿದರು. ಸ್ಯಾಮ್ ಕೋನ್ಸಟಾಸ್ 49 ರನ್ ಗಳಿಸಿದರು.




