————————————-ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ

ಕಿತ್ತೂರು : ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಕಾವು ದಿನೇ ದಿನೇ ಜೋರಾಗುತ್ತಿದ್ದು, ಇಂದು ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಗೆ ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಹಾಗೂ ಮಾಜಿ ಅಧ್ಯಕ್ಷ ನಾಸಿರ್ ಬಾಗವಾನ್ ಹಾಗೂ ಯುವ ಮುಖಂಡ ರುದ್ರಗೌಡ ಪಾಟೀಲ್ ನೇತೃತ್ವದ ಮಲಪ್ರಭಾ ಸಕ್ಕರೆ ಕಾರ್ಖಾನೆ ರೈತರ ಹಾಗೂ ಕಾರ್ಮಿಕರ ಹಿತರಕ್ಷಣಾ ಪ್ಯಾನಲ್ ವತಿಯಿಂದ ಇಂದು ಪ್ರಚಾರ ಪತ್ರವನ್ನು ಬಿಡುಗಡೆ ಮಾಡಿ ಎಲ್ಲಾ ಪ್ಯಾನಲ್ ನ ಸದಸ್ಯರ ನೇತೃತ್ವದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾಸಿರ್ ಬಾಗವಾನ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಹಾಗೂ ಮಡಿವಾಳಯ್ಯ ಹಿರೇಮಠ ಮಾತನಾಡಿ ರೈತಸಂಘದ ಪ್ಯಾನಲ್ ಹಾಗೂ ಚೆನ್ನರಾಜು ಹಟ್ಟಿಹೊಳಿ ಪ್ಯಾನಲ್ ಗೇ ಟಾಂಗ್ ನೀಡಿದರು.
ವರದಿ: ಬಸವರಾಜು




