ಚೇಳೂರು : ಕರ್ನಾಟಕ ಸರ್ಕಾರದ ಆದೇಶದಂತೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಚೇಳೂರು ತಾಲ್ಲೂಕಿನ ದಂಡಾಧಿಕಾರಿ ಶ್ವೇತಾ ರವರು ಪಟ್ಟಣದ ಬಾಗೇಪಲ್ಲಿ ರಸ್ತೆ ಬದಿಯಲ್ಲಿರುವ ಪಾರ್ವತಮ್ಮ ಎಂಬುವವರ ಮನೆಗೆ ಭೇಟಿ ನೀಡಿ ಖುದ್ದಾಗಿ ತಾವೇ 60 ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಪಡೆದು ಸಮೀಕ್ಷೆ ಕಾರ್ಯಕ್ಕೆ ಸಾಂಕೇತಿಕವಾಗಿ ಚಲನೆ ನೀಡಿ ಮಾತನಾಡಿದ ಅವರು ಯಾರು ಸಮೀಕ್ಷೆಯಿಂದ ಹೊರಗೂಳಿಯಬಾರದು ಪ್ರತಿಯೊಂದು ಮನೆಗೂ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಬೇಕೆಂದು ಗಣತಿದಾರರಿಗೆ ಶುಭಕೋರಿದರು.

ಈ ಸಂದರ್ಭದಲ್ಲಿ ಚೇಳೂರು ಹೋಬಳಿಯ ಸಿಆರ್ಪಿಗಳಾದ ಬಾಲಾಜಿ ಡಿಕೆ, ವಿಜಯ್ ಕುಮಾರ್, ಸಮಿಉಲ್ಲಾ, ಕೆ ಮಂಜುನಾಥ, ನರೇಶ, ಹಾಗೂ ಬಾಗೇಪಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಆಂಜನೇಯಲು, ಲಕ್ಷ್ಮೀನಾರಾಯಣ, ಶಿಕ್ಷಕರಾದ ಸುರೇಶ್ ಬಾಬು, ಶ್ರೀನಿವಾಸ್ ರೆಡ್ಡಿ ಇತರೆ ಶಿಕ್ಷಕರು ಹಾಗೂ ತಾಲ್ಲೂಕುಕಚೇರಿ ಸಿಬ್ಬಂದಿಯವರು ಹಾಜರಿದ್ದರು.
ವರದಿ :ಯಾರಬ್. ಎಂ.




