Ad imageAd image

ಕೊಲ್ಲಾಪುರದ ಮಹಾಲಕ್ಮಿಗೆ ನವರಾತ್ರಿ ಉತ್ಸವದ 2ನೇ ದಿನ ಮಂಗಳವಾರ ಬಗಲಾದೇವಿ ರೂಪದಲ್ಲಿ ಅಲಂಕಾರ ಪೂಜೆ

Bharath Vaibhav
ಕೊಲ್ಲಾಪುರದ ಮಹಾಲಕ್ಮಿಗೆ ನವರಾತ್ರಿ ಉತ್ಸವದ 2ನೇ ದಿನ ಮಂಗಳವಾರ ಬಗಲಾದೇವಿ ರೂಪದಲ್ಲಿ ಅಲಂಕಾರ ಪೂಜೆ
WhatsApp Group Join Now
Telegram Group Join Now

ಎರಡನೇ ದಿನವೂ 40ಸಾವಿರಕ್ಕೂ ಅಧಿಕ ಭಕ್ತರಿಂದ ದರ್ಶನ. ಆಂಕರಿಂಗ್=ಹೌದು ಮೂರುವರೆ ಶಕ್ತಿ ಪೀಠಗಳಲ್ಲಿಯ ಒಂದಾದ ಕೊಲ್ಲಾಪುರದ ಮಹಾಲಕ್ಷ್ಮಿಗೆ ಶಾರದೆಯ ನವರಾತ್ರಿ ಉತ್ಸವದ ಎರಡನೇ ದಿನ ಮಂಗಳವಾರ ಸಂಜೆ ಕೈಯಲ್ಲಿ ತ್ರಿಶೂಲ ಹಿಡಿದು ರಾಕ್ಷಸರ ನಾಲಿಗೆ ಕಿತ್ತ ದುರ್ಗಾವತಾರ ಬಗಲಾದೇವಿ ರೂಪದಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು. ಪ್ರಸಕ್ತ ವರ್ಷ ನವರಾತ್ರಿ ಉತ್ಸವದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿಗೆ 11 ವಿವಿಧ ರೂಪಗಳಲ್ಲಿ ಅಲಂಕಾರ ಪೂಜೆ ನಡೆಯಲಿದ್ದು ಉತ್ಸವದ ಎರಡನೇ ದಿನವೂ ಮಂಗಳವಾರ ದಂದು ಕರ್ನಾಟಕ ಮಹಾರಾಷ್ಟ್ರದಿಂದ 40 ಸಾವಿರಕ್ಕೂ ಅಧಿಕ ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಮಂದಿರದಲ್ಲಿ ಕರ್ನಾಟಕ ಮಹಾರಾಷ್ಟ್ರದಿಂದ ಆಗಮಿಸಿದ ಭಕ್ತರು ಮಹಾಲಕ್ಷ್ಮಿ ದೇವಿಗೆ ಕುಂಕುಮಾರ್ಚನೆ, ಶ್ರೀಫಲಾರ್ಪಣೆ ಅಭಿಷೇಕ ಮಾಡಿ ಹರಕೆ ಪೂರೈಸಿದರು. ಹಾಗಾದರೆ ಬನ್ನಿ ವೀಕ್ಷಕರೇ ಮೂರುವರೆ ಶಕ್ತಿ ಪೀಠಗಳಲ್ಲಿ ಒಂದಾದ ಮಹಾಲಕ್ಷ್ಮಿಯ ನವರಾತ್ರಿ ಉತ್ಸವದ ಎರಡನೇ ದಿನದ ಅಲಂಕಾರ ಪೂಜೆಯನ್ನು ಕಂಡು ಪುನೀತರಾಗೋಣ .

ವರದಿ: ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!