ದುಬೈ: ಭಾರತ ಹಾಗೂ ಬಾಂಗ್ಲಾ ದೇಶ ಕ್ರಿಕೆಟ್ ತಂಡಗಳು ಇಲ್ಲಿ ನಡೆದಿರುವ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್-4 ಪಂದ್ಯದಲ್ಲಿ ಇಂದು ಮುಖಾಮುಖಿಯಾಗಲಿವೆ.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಬಾಂಗ್ಲಾ ಹಾಗೂ ಭಾರತ ಎರಡೂ ತಂಡಗಳು ತಮ್ಮ ಪಾಲಿನ ಮೊದಲ ಸೂಪರ್-4 ಪಂದ್ಯಗಳನ್ನು ಗೆದ್ದುಕೊಂಡು ಕಣಕ್ಕೆ ಇಳಿಯುತ್ತಿವೆ. ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ, ಭಾರತದ ಫೈನಲ್ ಪ್ರವೇಶ ಖಚಿತವಾಗಲಿದೆ. ಬಾಂಗ್ಲಾ ಗೆದ್ದರೆ ಬಾಂಗ್ಲಾದ ಫೈನಲ್ ಪ್ರವೇಶ ಖಚಿತವಾಗಲಿದೆ.
ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ನಿರೀಕ್ಷೆಯಂತೆ ಭಾರತ ಗೆದ್ದು ನಾಳೆ ನಡೆಯುವ ಬಾಂಗ್ಲಾ- ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಭಾರತ ಪಾಕ್ ತಂಡಗಳು 28 ರಂದು ಫೈನಲ್ ಪಂದ್ಯ ಆಡಲು ಅರ್ಹತೆ ಪಡೆಯಲಿವೆ.




