ಲಕ್ನೋ: ಪ್ರವಾಸಿ ಆಸ್ಟೆçÃಲಿಯಾ ಎ ಹಾಗೂ ಭಾರತ ಎ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತ ಎ ತಂಡವು ದಿಢೀರ್ ಕುಸಿತ ಕಂಡಿದೆ.
ಆಸ್ಟೆçÃಲಿಯಾ ಎ ತಂಡದ ೪೨೦ ರನ್ಗಳಿಗೆ ಉತ್ತರವಾಗಿ ಬ್ಯಾಟ್ ಮಾಡಲು ಇಳಿದ ಭಾರತ ಎ, ತಂಡವು ಎರಡನೇ ದಿನ ಮೂರನೇ ಅವಧಿಯ ಆಟದಲ್ಲಿ ೮ ವಿಕೆಟ್ ಗೆ ೧೬೪ ರನ್ ಗಳಿಸಿದ್ದು, ೨೫೬ ರನ್ ಗಳ ಹಿನ್ನೆಡೆಯಲ್ಲಿತ್ತು. ಸಾಯಿ ಸುರ್ಶನ್ ೬೪ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಗರ್ನೋರ್ ಬ್ರಾರ್ ರನ್ ಖಾತೆ ತೆರೆಯದೇ ಕ್ರೀಸ್ ಬಳಿ ಇದ್ದರು.
ಭಾರತ ಎ ಪರ ಇಂದು ಸಾಯಿ ಸುರ್ಶನ್ ಮಾತ್ರ ಕೊಂಚ ಹೋರಾಟ ನೀಡಿದರು. ಅವರು ೫ ಬೌಂಡರಿ ೧ ಸಿಕ್ಸರ್ ನೆರವಿನಿಂದ ೬೪ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಎನ್. ಜಗದೀಶನ್ ೬ ಬೌಂಡರಿಗಳ ನೆರವಿನಿಂದ ೩೮ ರನ್ ಗಳಿಸಿದರು.




