ಮೊಳಕಾಲ್ಮುರು : ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮತ್ತು ಮಾಜಿ ಸಂಸದರಾದ ಜಸ್ಟಿಸ್ ಎನ್ ವೈ ಹನುಮಂತಪ್ಪನವರ 86ನೇ ಹುಟ್ಟುಹಬ್ಬದ ಸಂಭ್ರಮಾಚರಣೆ.
ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಎನ್ ವೈ ಹನುಮಂತಪ್ಪನವರು ಅನೇಕ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯರು ಮತ್ತು ಮುಖಂಡರಾದ ಜಿ ಪ್ರಕಾಶ್ ರವರು ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್ ಎನ್ ವೈ ಹನುಮಂತಪ್ಪನವರ 86ನೇ ಹುಟ್ಟು ಹಬ್ಬದ ಪ್ರಯುಕ್ತ ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಮತ್ತು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿ ಅವರು ಮಾತನಾಡಿದರು ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿ ಅತಿ ಉನ್ನತ ಹುದ್ದೆಗೇರಿ ಬಡವರ ಕಷ್ಟಗಳನ್ನು ಹತ್ತಿರದಿಂದ ಗಮನಿಸಿದಂತಹ ಧೀಮಂತ ನಾಯಕ ಮಾಡಿದಂತಹ ಕೆಲಸಗಳು ಶಾಶ್ವತವಾಗಿ ಉಳಿದಿವೆ. ಆ ದೇವರು ಅವರಿಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಅಬ್ದುಲ್ಲಾ ಮಾತನಾಡಿ, ಎಸ್ ಟಿ ಸಮುದಾಯದಲ್ಲಿ ಹುಟ್ಟಿ ಅತ್ಯುನ್ನತ ಹುದ್ದೆಗೆರಿದ ಉತ್ತಮ ವ್ಯಕ್ತಿ ಅವರಿಗೆ ಮತ್ತು ಆ ಸಮುದಾಯಕ್ಕೆ ಒಂದು ಹೆಮ್ಮೆಯ ವಿಚಾರ ಎಂದರು.
ಕಾಂಗ್ರೆಸ್ ಮುಖಂಡರು ಮತ್ತು ಡಿಎಸ್ಎಸ್ ಸಂಚಾಲಕರಾದ ನಾಗಭೂಷಣ ಮಾತನಾಡಿ ಜಿಲ್ಲಾ ಮಾಜಿ ಸಂಸದರು ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಎನ್ ವೈ ಹನುಮಂತಪ್ಪನವರಿಗೆ ಕಾಂಗ್ರೆಸ್ ಮುಖಂಡರು ಮತ್ತು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮತ್ತು ಮುಖಂಡರಿಂದ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಇನ್ನು ಹೆಚ್ಚಿನ ಆರೋಗ್ಯ ಐಶ್ವರ್ಯ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಗುತ್ತಿಗೆದಾರರಾದ ಎಸ್ ಖಾದರ್ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಓಬಣ್ಣ ಪಿಗೋಪಾಲ್ ಮುಖಂಡರಾದ ಯಜ್ಜನಳ್ಳಿ ನಾಗರಾಜ್ ರಫಿ ರಾಯಪುರದ ಸುರೇಶ್ ಬಡೋ ಬಯ್ಯ ಮಲ್ಲಿಕಾರ್ಜುನ್ ರೇಷ್ಮೆ ಸುರೇಶ್ ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ ವೈದ್ಯಾಧಿಕಾರಿಗಳಾದ ಮಂಜುನಾಥ್, ಮುಖಂಡರು ಇನ್ನು ಹಲವರು ಪ್ರಸ್ತುತರಿದ್ದರು.
ವರದಿ : ಪಿಎಂ ಗಂಗಾಧರ




