Ad imageAd image

ಹಾಸ್ಟೆಲ್‌ ಶೌಚಾಲಯದಲ್ಲಿ ವಿದ್ಯಾರ್ಥಿ ಸಾವು

Bharath Vaibhav
ಹಾಸ್ಟೆಲ್‌ ಶೌಚಾಲಯದಲ್ಲಿ ವಿದ್ಯಾರ್ಥಿ ಸಾವು
WhatsApp Group Join Now
Telegram Group Join Now

ಶಿರಾ: ನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಮುಂಜಾನೆ ಮಹಮದ್ ರಫಿ (19) ಎಂಬ ವಿದ್ಯಾರ್ಥಿ ಶೌಚಾಲಯದಲ್ಲಿ ಮೃತಪಟ್ಟಿದ್ದಾನೆ.

ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಮಹಮದ್‌ ರಫಿ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ. ಅನಾರೋಗ್ಯದಿಂದ ಬಳಲುತ್ತಿದ್ದ ಮಹಮದ್ ರಫಿ ವಾರದ ಹಿಂದೆ ಸ್ವಗ್ರಾಮಕ್ಕೆ ತೆರಳಿ ಚಿಕಿತ್ಸೆ ಪಡೆದು ಮಂಗಳವಾರ ವಿದ್ಯಾರ್ಥಿ ನಿಲಯಕ್ಕೆ ಮರಳಿದ್ದ. ರಾತ್ರಿ ಊಟ ಮಾಡಿ ಮಲಗಿದ್ದ. ಬುಧವಾರ ಮುಂಜಾನೆ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಎಷ್ಟು ಸಮಯವಾದರೂ ಶೌಚಾಲಯದಿಂದ ಹೊರಕ್ಕೆ ಬಾರದ ಕಾರಣ ಇತರ ವಿದ್ಯಾರ್ಥಿಗಳು ಕೂಗಿದರು ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲನ್ನು ಹತ್ತಿ ನೋಡಿದಾಗ ಮಹಮದ್ ರಫಿ ಬಿದ್ದಿರುವುದನ್ನು ನೋಡಿ ವಾರ್ಡನ್‌ಗೆ ತಿಳಿಸಿದ್ದಾರೆ. ಬಾಗಿಲು ತೆರೆದು ನೋಡುವ ವೇಳೆಗೆ ಮಹಮದ್ ರಫಿ ಮೃತಪಟ್ಟಿದ್ದ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!