ಮೊಳಕಾಲ್ಮೂರು : ಈ ಬಾರಿ ವಾಲ್ಮೀಕಿ ಜಯಂತಿಯನ್ನು ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಣೆ ಮಾಡೋಣ, ನಾನು ಕೂಡ ಸಮುದಾಯದ ಒಬ್ಬ ವ್ಯಕ್ತಿಯಾಗಿ ಬರುತ್ತೇನೆ ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದರು.
ಗುರುವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರೊಂದಿಗೆ ಮಾತನಾಡಿದರು. ನಾನು ವಾಲ್ಮೀಕಿ ಸಮುದಾಯದ ಮುಖಂಡನಾಗಿ ಬರುತ್ತೇನೆ ಆಮೇಲೆ ಶಾಸಕರಾಗಿ ನಿಮ್ಮ ಜೊತೆ ಇರುತ್ತೇನೆ.
ಕಳೆದ ಬಾರಿ ವಾಲ್ಮೀಕಿ ಜಯಂತಿ ಕಾರಣಾಂತರದಿಂದ ಆಚರಿಸಲಾಗಲಿಲ್ಲ ಈ ಬಾರಿ ಎಲ್ಲಾ ವೈಮನಸುಗಳನ್ನು ಬಿಟ್ಟು ಎಲ್ಲರೂ ಒಂದಾಗಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಣೆ ಮಾಡಬೇಕು. ಆದ್ದರಿಂದ ಎಲ್ಲಾ ಹಿರಿಯರನ್ನು ಒಗ್ಗೂಡಿಸಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡೋಣ ಎಂದರು.
ಜಾತಿ ಗಣತಿ ವಿಚಾರದಲ್ಲಿ ನಮ್ಮ ಸಮಾಜಕ್ಕೆ ಆಗುವ ಅನ್ಯಾಯಗಳ ಬಗ್ಗೆ ಎಲ್ಲಾ ಶಾಸಕರು ಎಲ್ಲಾ ಸಚಿವರು ಗಮನದಲ್ಲಿ ಇಟ್ಟುಕೊಂಡೆ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಸ್ ಟಿ ಸಮುದಾಯಕ್ಕೆ ಕುರುಬರನ್ನು ಸೇರಿಸುವ ವಿಚಾರ ಎಲ್ಲರ ಗಮನದಲ್ಲಿದೆ, ಅದು ಅಷ್ಟು ಸುಲಭದ ಮಾತಲ್ಲ. ಅದನ್ನು ಬಿಟ್ಟು ವಾಲ್ಮೀಕಿ ಜಯಂತಿಯನ್ನು ತಾಲೂಕಿನ ಎಲ್ಲಾ ಜನಗಳು ಸೇರಿ ಅದ್ದೂರಿಯಾಗಿ ಮಾಡಿ ಒಳ್ಳೆಯ ಸಂದೇಶವನ್ನು ನೀಡೋಣ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಯಪುರದ ಸುರೇಶ್, ವಕೀಲರಾದ ಬಿ ವಿಜಯ್, ಭಕ್ತ ಪ್ರಹಲ್ಲಾದ, ಮುಖಂಡರಾದ ದೇವಯ್ಯ, ಜಗಳೂರಯ್ಯ, ಪಟೇಲ್ ಜಿ ಪಾಪ ನಾಯಕ್, ಇನ್ನು ಹಲವು ವಾಲ್ಮೀಕಿ ಮುಖಂಡರು ವಾಲ್ಮೀಕಿ ಜಯಂತಿಯ ಆಚರಣೆ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಅಧಿಕಾರಿಗಳು ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ




