ಸಿಂಧನೂರು : ಸೆ.25 ಎಸ್. ಟಿ. ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮಾಜವನ್ನು ಸೇರ್ಪಡೆ ಮಾಡಲೇತ್ನಿಸುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಸಿಂಧನೂರು ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ನಗರದ ಗಣೇಶ್ ದೇವಸ್ಥಾನದಿಂದ ತಾಶಿಲ್ದಾರ್ ಕಛೇರಿಯವರಿಗೆ ಬೃಹತ್ ಪ್ರತಿಭಟನೆ ನಡೆಸಿ ಮಹಾತ್ಮ ಗಾಂಧಿ ಸರ್ಕಲ್ಲಿನಲ್ಲಿ ರಸ್ತೆ ತಡೆ ಚಳುವಳಿ ನಡೆಸಿ ಮಾತನಾಡಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಸರ್ಕಾರ ಅನ್ಯ ಸಮುದಾಯಗಳನ್ನು ಸೇರಿಸಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದರೆ ನಾವು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿ ತಾಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ- ಅಧ್ಯಕ್ಷ ಆರ್. ತಿಮ್ಮಯ್ಯ ನಾಯಕ. ಉಪಾಧ್ಯಕ್ಷ ಓಬಳೇಶ್ ನಾಯಕ. ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯಕ. ವಿಶ್ವನಾಥ್ ನಾಯಕ. ಮೌನೇಶ್ ದೊರೆ. ವೆಂಕಟೇಶ್ ರಾಗಲಪರ್ವಿ. ದೇವೇಂದ್ರ ನಾಯಕ. ಅರುಣ್ ಕುಮಾರ್ ನಾಯಕ ಇನ್ನು ಅನೇಕರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.




