ಸಿಂಧನೂರು : ಸೆ.25 ರಂದು ಆರೋಗ್ಯ ದಸರಾ ಅಂಗವಾಗಿ ನಮ್ಮ ನಡೆ ಆರೋಗ್ಯದ ಕಡೆ ಕಾಲ್ನಡಿಗೆ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಈ ಕುರಿತು ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ವೀಕ್ಷಣೆ ಮಾಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸೆಪ್ಟಂಬರ್ 27ರಂದು ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮತ್ತು ಘನ ಉಪಸ್ಥಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸುವರು.
ಹಾಗೂ ಇದೇ ಸಂದರ್ಭದಲ್ಲಿ ನೂತನ ತಾಲೂಕ ಪಂಚಾಯತಿ ಕಾರ್ಯಾಲಯ ಉದ್ಘಾಟನೆ. ಬಾಲಕರ ಪದವಿ ಪೂರ್ವ ಕಾಲೇಜು. ಡಿಗ್ರಿ ಕಾಲೇಜು ಕಟ್ಟಡ. ಅಕ್ಕಮಹಾದೇವಿ ಸ್ನಾತಕೋತ್ತರ ಕೇಂದ್ರ ವಸತಿ ನಿಲಯ ಹಾಗೂ ಜಿಟಿಟಿಸಿ ಕೌಶಲ್ಯ ತರಬೇತಿ ಕೇಂದ್ರ ಶಂಕುಸ್ಥಾಪನೆಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ತಾಲೂಕ ವೈದ್ಯಾಧಿಕಾರಿ ಡಾ. ಅಯ್ಯನಗೌಡ. ತಾಯಿ ಮಕ್ಕಳ ಆಸ್ಪತ್ರೆ ಆಡಳಿತಧಿಕಾರಿ ಡಾ. ನಾಗರಾಜ ಕಾಟ್ವ. ಡಾ. ಬಿ. ಎನ್. ಪಾಟೀಲ್. ಡಾ. ವೀರಭದ್ರಗೌಡ. ಡಾ. ಸುರೇಶ್ ಗೌಡ. ಡಾ. ಶಕುಂತಲಾ ಪಾಟೀಲ್. ಡಾ. ಕಾವೇರಿ. ಡಾ. ಕೊನಿಕ ಕಾಟ್ವ. ಇನ್ನಿತರರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.




