ಕೊಲ್ಲಾಪುರದ ಮಹಾಲಕ್ಮಿಗೆ ನವರಾತ್ರಿ ಉತ್ಸವದ ನಾಲ್ಕನೇ ದಿನ ಶ್ರೀ ಮಾತಂಗಿ ರೂಪದಲ್ಲಿ ಅಲಂಕಾರ ಪೂಜೆ. ವಿವಿಧ ರಾಜ್ಯಗಳಿಂದ ಇದುವರೆಗೆ ಒಂದು ಲಕ್ಷ 20 ಸಾವಿರಕ್ಕೂ ಅಧಿಕ ಭಕ್ತರಿಂದ ದರ್ಶನ.
ಮೂರುವರೆ ಶಕ್ತಿ ಪೀಠಗಳಲ್ಲಿಯ ಒಂದಾದ ಕೊಲ್ಲಾಪುರದ ಮಹಾಲಕ್ಷ್ಮಿಗೆ ಶಾರದೆಯ ನವರಾತ್ರಿ ಉತ್ಸವದ 4 ನೇ ದಿನ ಗುರುವಾರ ಮಹಾಲಕ್ಮಿ ಗೆ ಸಂಜೆ ಶ್ರೀ ಮಾತಂಗಿ ರೂಪದಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು. ಪ್ರಸಕ್ತ ವರ್ಷ ನವರಾತ್ರಿ ಉತ್ಸವದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿಗೆ 11 ವಿವಿಧ ರೂಪಗಳಲ್ಲಿ ಅಲಂಕಾರ ಪೂಜೆ ನಡೆಯಲಿದ್ದು ಉತ್ಸವದ 4ನೇ ದಿನವೂ 30 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದು ಇದುವರೆಗೆ ಕರ್ನಾಟಕ ಮಹಾರಾಷ್ಟ್ರ ಗೋವಾ, ಆಂದ್ರ ಸೇರಿದಂತೆ ವಿವಿಧ ರಾಜ್ಯಗಳಿಂದ 1 ಲಕ್ಷ 20 ಸಾವಿರಕ್ಕೂ ಅಧಿಕ ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದಿ ದ್ದಾರೆಂದು ಮಹಾಲಕ್ಷ್ಮಿ ದೇವಸ್ಥಾನ ಕಮೀಟಿ ತಿಳಿಸಿದ್ದು .

ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಕಮೀಟಿ ವತಿಯಿಂದ ಮಂದಿರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಮಹಾಲಕ್ಷ್ಮಿ ದೇವಿಗೆ ಕುಂಕುಮಾರ್ಚನೆ, ಶ್ರೀಫಲಾರ್ಪಣೆ ಅಭಿಷೇಕ ಮಾಡಿ ಹರಕೆ ಪೂರೈಸಿದರು. ಹಾಗಾದರೆ ಬನ್ನಿ ವೀಕ್ಷಕರೇ ಮೂರುವರೆ ಶಕ್ತಿ ಪೀಠಗಳಲ್ಲಿ ಒಂದಾದ ಮಹಾಲಕ್ಷ್ಮಿಯ ನವರಾತ್ರಿ ಉತ್ಸವದ 4ನೇ ದಿನದ ಅಲಂಕಾರ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳೋಣ.
ವರದಿ:ಮಹಾವೀರ ಚಿಂಚಣೆ



