ಬೆಂಗಳೂರು : ನಮ್ಮ ನಾಯಕ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅಬ್ದುಲ್ ವಾಜಿದ್ ಅವರ ಹುಟ್ಟುಹಬ್ಬವನ್ನು ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ, ಶ್ರೀನಿವಾಸ ಮಂಜುನಾಥ ಫೌಂಡೇಶನ್ ಅಧ್ಯಕ್ಷ ಹಾಗೂ ಗ್ರೆಟರ್ ಬೆಂಗಳೂರು ಪ್ರಭಲ
ಆಕಾಂಕ್ಷಿ ಅಭ್ಯರ್ಥಿ ಡಾ. ಎಸ್ ಮಂಜುನಾಥ್ (ಎಬಿಬಿ ಮಂಜಣ್ಣ) ರವರ ನೇತೃತ್ವದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡಿನ ಮಂಜುನಾಥನಗರದಲ್ಲಿ ಇರುವ ತಮ್ಮ ಸ್ವಗೃಹದಲ್ಲಿ “ಅಬ್ದುಲ್ ವಾಜಿದ್ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಹಾಗೂ ದಸರಾ ಹಬ್ಬದ ನಿಮಿತ್ತ ಪೌರಕಾರ್ಮಿಕರಿಗೆ ಸೀರೆ, ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಆಯೋಜಿಸಲಾಗಿತ್ತು.
ಅಬ್ದುಲ್ ವಾಜಿದ್ ರವರಿಗೆ ಡಾ. ಮಂಜುನಾಥ್ ಎಬಿಬಿ ಅವರು ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ತಮ್ಮ ನಾಯಕನಿಗೆ ಹುಟ್ಟು ಹಬ್ಬದ ಶುಭ ಕೋರಿದರು.

ಗೌರವ ಸ್ವೀಕರಿಸಿ ಮಾತನಾಡಿದ ಅಬ್ದುಲ್ ವಾಜಿದ್, ‘ಯಾವುದೇ ಅಪೇಕ್ಷೆ ಇಲ್ಲದೇ ಸಮಾಜ ಮುಖಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಎಬಿಬಿ ಮಂಜಣ್ಣ ದಾಸರಹಳ್ಳಿ ಕ್ಷೇತ್ರದಲ್ಲಿ 18 ವಾರ್ಡ್ ಗಳ ಪೈಕಿ ಒಂದು ವಾರ್ಡ್ ನಲ್ಲಿ ಸ್ಪರ್ಧಿಸಬೇಕು ಹಾಗೂ ಕಾರ್ಪೋರೇಟರ್ ಆಗಬೇಕು. ಚುನಾವಣೆ ವೇಳೆ ವಿವಿಧ ಪಕ್ಷದವರು ಬರುತ್ತಾರೆ. ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವಂತ ವ್ಯಕ್ತಿ ಎಂದರೆ ಡಾ. ಮಂಜುನಾಥ್ ಎಬಿಬಿ ಅವರು ಕೊರೋನಾದಲ್ಲಿ ಆಹಾರ ಪದಾರ್ಥಗಳ ಕಿಟ್ , ಆರೋಗ್ಯ ಸೇವೆ ಮತ್ತು ಬೇಸಿಗೆ ಕಾಲದಲ್ಲಿ ಭಗೀರಥನಾಗಿ ನೀರು ಪ್ರತಿ ಮನೆ ಮನೆಗೆ ಸರಬರಾಜು ಮಾಡಿದ್ದಾರೆ ಮುಂಬರುವ ದಿನಗಳಲ್ಲಿ ಮಂಜಣ್ಣ ಅವರಿಗೆ ಆಶಿರ್ವಾದ ಮಾಡಿರಿ ಎಂದು ಹೇಳಿದರು.
ಮಂಜುನಾಥ್ ಎಬಿಬಿ ಅವರು ಸರ್ವರಿಗೂ ಸ್ವಾಗತ ಕೋರಿದರು. ಕಾಂಗ್ರೆಸ್ ಮುಖಂಡ ಭಾಸ್ಕರ್ ಆಚಾರಿ ಮತ್ತು ರಾಮಚಂದ್ರ ವಿಶ್ವಕರ್ಮ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಗೆ ಚಾಲನೆ ನೀಡಿದರು. ಖ್ಯಾತ ಜಾನಪದ ಗಾಯಕ ಕುಣಿಗಲ್ ರಾಮಚಂದ್ರ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೃತ್ಯುಂಜಯ ಗೌಡ್ರು, ಎಬಿಬಿ ಮಂಜಣ್ಣ ನವರ ಧರ್ಮಪತ್ನಿ ಶ್ರೀಮತಿ ಚಂದ್ರಕಲಾ ಮಂಜುನಾಥ್, ಸುಪುತ್ರ ಅರ್ಜುನ್ ಮಂಜುನಾಥ್, ಧನಂಜಯ್, ಕೇಶವ್ ದಾಸ್, ರೂಪಶ್ರೀ ಕೇಶವ್ ದಾಸ್, ಸುಶೀಲಾ, ಸುಗುಣ, ಸುಮತಿ, ಲತಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮಂಜುನಾಥ್ ನಗರದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.
ವರದಿ : ಅಯ್ಯಣ್ಣ ಮಾಸ್ಟರ್




