ಕಲಬುರಗಿ: ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ ಗ್ರಾಮದಲ್ಲಿ ವಿಧ ಬೇಡಿಕೆಗಳನ್ನು ಈಡೇರಿಸಿಲು ಮಳೆಯನ್ನು ಲೆಕ್ಕಿಸದೆ ಎತ್ತು ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್ ಗಳೊಂದಿಗೆ ನೂರಾರು ರೈತರು ಎರಡುವರೆ ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ರೈತನು ತನ್ನ ಹೊಲದಲ್ಲಿ ಬೆಳೆ ಬೆಳೆದು ಮಾರುಕಟ್ಟೆಗೆ ಹಾಕುತ್ತಾನೆ. ಧಾರಾಕಾರ ಹಾಗೂ ನಿರಂತರ ಮಳೆಯಿಂದ ಹೊಲದಲ್ಲಿ ನೀರು ನಿಂತಿರುತ್ತದೆ. ಇದರಿಂದ ಬೆಳೆ ಸಂಪೂರ್ಣವಾಗಿ ನಾಶವಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಪತ್ರ ಕೊಟ್ಟರು ಸಹಿತ ಯಾವುದೇ ಪರಿಹಾರ ಸಿಕ್ಕಿಲ್ಲ.
ಕಳೆದ ವರ್ಷವೂ ಕೂಡ ಬೆಳೆ ನಾಶಕ್ಕೆ ಪರಿಹಾರ ಹಾಕುತ್ತೇನೆಂದು ಸರ್ಕಾರ ಹೇಳಿದರು ಕೂಡ ಯಾವುದೇ ಪರಿಹಾರ ನೀಡಿಲ್ಲ ಅದಕ್ಕಾಗಿ ತಾಲೂಕು ದಂಡಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ ಎಂದು ರೈತ ಮುಖಂಡರಾದ ಶರಣಬಸಪ್ಪ ಮಾಮನ್ ಶೆಟ್ಟಿ ಹಾಗೂ ವೀರಣ್ಣ ಗಂಗಾಣಿ ಹೇಳಿದರು.
ವರದಿ: ಸುನಿಲ್ ಸಲಗರ



