—————————————–ಕಾರ್ಮಿಕರ ಗೋಳು ಕೇಳೋರ್ಯಾರು..?
ಲಿಂಗಸ್ಗೂರು: ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ದೇಶಕ್ಕೆ ಚಿನ್ನ ನೀಡುವ ಏಕೈಕ ಕಂಪನಿ ಯಾಗಿದ್ದು, ಚಿನ್ನ ತೆಗೆಯುವ ಕಾರ್ಮಿಕನಿಗೆ ದಿನನಿತ್ಯ ನರಕ ಯಾತನೆ,ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಚಿನ್ನದ ಗಣಿ ಕಂಪನಿ ವತಿಯಿಂದ ವಾಸ ಮಾಡಲು ಮನೆ (ಕ್ವಾರ್ಟರ್ಸ್ ) ನೀಡಿರುತ್ತಾರೆ ಆದರೆ ಮೂಲಭೂತ ಸೌಕರ್ಯವಿಲ್ಲದೆ ರಸ್ತೆ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ ಮಳೆ ಬಂತಂದರೆ ಸಾಕು ಮನೆಯ ಒಳಗೆ ನುಗ್ಗುತ್ತಿರುವ, ಮಳೆ ನೀರಿನಿಂದ ದಿನನಿತ್ಯ ನರಕ ಯಾತನೆ ಅನುಭವಿಸುವ ಕಾರ್ಮಿಕರ ಕುಟುಂಬದ ಗೋಳು ಕೇಳೋರ್ಯಾರು..?
ಹಟ್ಟಿ ಕಂಪನಿಯ ವ್ಯಾಪ್ತಿಯಲ್ಲಿರುವ ಲೇಬರ್ ಕ್ವಾಟ್ರಸ್ ಜತ್ತಿ ಕಾಲೋನಿಯಲ್ಲಿ ಹಲವಾರು ಕಾರ್ಮಿಕರ ಮನೆಗಳಿಗೆ ಮನೆ ಒಳಗೆ ನೀರು ನುಗ್ಗಿ ಮನೆಯಲ್ಲಿರುವ ಸಾಮಾನುಗಳೆಲ್ಲ ನೀರಿನಲ್ಲಿ ಮುಳುಗಿದೆ ಕೂಡಲು ಸ್ಥಳವಿಲ್ಲದೆ ಪರದಾಡುವ ಸ್ಥಿತಿ ಕಾರ್ಮಿಕ ಕುಟುಂಬಸ್ಥರ ಇದಾಗಿದೆ ಮನೆಗೊಂದು ಶೌಚಾಲಯ ಇದ್ದರೂ ಶೌಚಾಲಯದ ಚೇಂಬರ್ ಬ್ಲಾಕ್ ಆದ ಕಾರಣ ಮನೆಯ ಶೌಚಾಲಯದ ಮೂಲಕ ತುಂಬಿ ಮಲಮೂತ್ರ ವಿಸರ್ಜನೆಯ ನೀರು ಸಹ ಮನೆ ಒಳಗೆ ನುಗ್ಗಿ ಬಂದಿದೆ. ಮನೆಯಲ್ಲಿ ವಾಸ ಮಾಡುವ ಕುಟುಂಬಸ್ಥರು ದುರ್ವಾಸನೆಯಲ್ಲಿ ದಿನ ಕಲಿಯುವ ಪರಿಸ್ಥಿತಿ ಉಂಟಾಗಿದೆ.
ಬೆಳಗಿಂದ ಮನೆಯಲ್ಲಿ ಯಾವುದೇ ಅಡುಗೆ ಸಹ ಮಾಡದೇ ಮನೆ ಒಳಗೆ ನುಗ್ಗಿದ ಕೊಳಚಿ ನೀರು ಹೊರಗಡೆ ಹಾಕುತ್ತಾ ದಿನ ಕಳೆಯುವ ಪರಿಸ್ಥಿತಿ ಕಾರ್ಮಿಕರ ಕುಟುಂಬಸ್ಥರದಾಗಿದೆ.
ವಾಸ ಮಾಡುವ ಕುಟುಂಬಸ್ಥರಿಗೆ ವಿಚಾರಿಸಿದಾಗ ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳಿಗೂ ತಿಳಿಸಿದರು ಯಾವುದು ಪ್ರಯೋಜನವಾಗಿಲ್ಲ ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ಅನುಭವಿಸುವ ಸ್ಥಿತಿ ನಮ್ಮದಾಗಿದೆ. ಹಟ್ಟಿ ಕಂಪನಿ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಾ ಮನೆ ಒಳಗೆ ನುಗ್ಗಿದ ನೀರನ್ನು ಬಕಿಟ್ ಮತ್ತು ಚಂಬುಗಳ ಮೂಲಕ ಹೊರ ಹಾಕುತ್ತಿರುವ ಜನರು ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳು ಬೆಚ್ಚನೆಯ ಮನೆ ಒಳಗೆ ಕುಳಿತರೆ ಚಿನ್ನ ತೆಗೆದು ಹಟ್ಟಿ ಚಿನ್ನದ ಗಣಿ ಕಂಪನಿಯನ್ನು ಉದ್ದಾರ ಮಾಡುವ ಕಾರ್ಮಿಕರು ಮಾತ್ರ ಕೊಳಚಿ ನೀರಿನಲ್ಲಿ ದಿನ ಕಳೆಯುವ ಪರಿಸ್ಥಿತಿ ಉಂಟಾಗಿದೆ.
ಇಲ್ಲಿಯ ಕಾರ್ಮಿಕರ ಪರಿಸ್ಥಿತಿ ಯಾವೊಬ್ಬ ಚುನಾಯಿತ ಪ್ರತಿನಿಧಿಗಳಾಗಲಿ ಅಥವಾ ಕಂಪನಿಯ ಅಧಿಕಾರಿಗಳಾಗಲಿ ಇತ್ತ ತಿರುಗು ನೋಡದೆ ಅದಕ್ಕೂ ನನಗೂ ಸಂಬಂಧ ಇಲ್ಲ ಅನ್ನುವ ರೀತಿಯಲ್ಲಿ ಅಧಿಕಾರಿಗಳು ಒಬ್ಬರಮೇಲೊಬ್ಬರು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲ ಅಧಿಕಾರಿಗಳಿಗೆ ನಮ್ಮ ವರದಿಗಾರರಾದ ಶ್ರೀನಿವಾಸ್ ಮಧುಶ್ರೀ ಕರೆ ಮಾಡಿದರೆ ಬೇ ಜವಾಬ್ದಾರಿ ಉತ್ತರ ನೀಡಿದರೆಂದು ತಿಳಿದು ಬಂದಿದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು, ಸಂಬಂಧಪಟ್ಟ ಅಧಿಕಾರಿಗಳು ಕಾರ್ಮಿಕರ ಬಗ್ಗೆ ಇಷ್ಟೊಂದು ಮಲತಾಯಿ ಧೋರಣೆ ತೋರಿಸದೆ ಕೂಡಲೆ ಕಾರ್ಮಿಕರ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮುಂದಾಗ ಬೇಕಾಗಿದೆ.
ಹಟ್ಟಿ ಚಿನ್ನದ ಕಂಪನಿಯು ಕೋಟಿ ಕೋಟಿ ಲಾಭ ಬಂದರೂ ಆ ಲಾಭ ಕೊಡುವ ಕಾರ್ಮಿಕರಿಗೆ ಸರಿಯಾದ ಮೂಲಭೂತ ಸೌಕರ್ಯ ಕೊಡಿಸದೆ ಇರುವುದು ಮಾತ್ರ ವಿಪರ್ಯಾಸ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಮತ್ತು ಸಿಬ್ಬಂದಿ ವರ್ಗದ ಚುನಾಯಿತ ಪ್ರತಿನಿಧಿಗಳು ಕಾರ್ಮಿಕರ ಮತ ಪಡೆದು ನೀವು ಚುನಾಯಿತ ಪ್ರತಿನಿಧಿಗಳಾಗಿದ್ದೀರಿ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸದ ನೀವು, ನಿಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಿ..?
ಹಟ್ಟಿ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಟ್ಟಿ ಕಂಪನಿಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಈ ಪರಸ್ಥಿತಿ ನಿಮ್ಮ ಮನೆಗಳಿಗಾಗಿದ್ದರೆ ಏನು ಮಾಡುತ್ತೀರಿ ಎಂಬುದು ಪ್ರಶ್ನೆ ಇಲ್ಲಿಯ ಕಾರ್ಮಿಕ ಕುಟುಂಬಸ್ಥರದಾಗಿದೆ.
ಕೆಲ ಕಾರ್ಮಿಕ ಕುಟುಂಬಸ್ಥರು ಬೆಳಗ್ಗೆಯಿಂದ ಮನೆಯಲ್ಲಿ ಕೊಳಚೆ ನೀರು ತುಂಬಿರುವ ಕಾರಣ ಅಡುಗೆಯೂ ಮಾಡದೆ ಉಪವಾಸದಲ್ಲಿ ದಿನ ಕಳೆಯುತ್ತಿದ್ದಾರೆ ಅಂಥವರ ಮನೆಗಳಿಗೆ ಊಟದ ವ್ಯವಸ್ಥೆಯು ಸಹ ಮಾಡದೆ ಇರುವ ಹಟ್ಟಿ ಚಿನ್ನದ ಕಂಪನಿಯ ಅಧಿಕಾರಿಗಳು ಕಾರ್ಮಿಕರ ಕುಟುಂಬಸ್ಥರು ರಾತ್ರಿ ಮಲಗಲು ನೀರಿನಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಶೌಚಾಲಯದ ಚೇಮರ್ ಬ್ಲಾಕ್ ಆದ ಕಾರಣ ಶೌಚಾಲಯದಿಂದಲೇ ನೀರು ಹೊರ ಬರುತ್ತಿರುವುದರಿಂದ ಅವರು ಬೆಳಗಿನಿಂದ ಶೌಚಾಲಯಕ್ಕೆ ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿನ್ನ ತೆಗಿಯುವ ಕಾರ್ಮಿಕರ ಕುಟುಂಬಸ್ಥರ ಮನೆಗಳಿಗ ಈ ರೀತಿ ಹವಡಸಂಭವಸದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳ ಬೇಕಾಗಿದೆ. ಕಾರ್ಮಿಕ ಕುಟುಂಬಸ್ಥರು ವಾಸ ಮಾಡುವ ಮನೆಗಳ ಮುಖ್ಯರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಮಾಡುವುದು ಕಂಪನಿ ಅಧಿಕಾರಿಗಳ ಕರ್ತವವಾಗಿದೆ ಕೆಲ ಚರಂಡಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚರಂಡಿ ನಿರ್ಮಾಣ ಮಾಡಿದರು ಅವುಗಳನ್ನು ನಿರ್ವಹಣೆ ಮಾಡದೇ ಮುಚ್ಚಿ ಹೋದರು ಅದರ ಬಗ್ಗೆ ಯಾರು ಗಮನಹರಿಸದೆ ಇರುವುದಕ್ಕೆ ಈ ಘಟನೆ ಸಾಕ್ಷಿ. ಇನ್ನಾದರೂ ಕಂಪನಿ ಅಧಿಕಾರಿಗಳು ಗಮನ ಹರಿಸಿ ಕಾರ್ಮಿಕರ ವಾಸ ಮಾಡುವ ಮನೆಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಕೆ ಮುಂದಾಗಬೇಕಾಗಿದೆ.
ವರದಿ : ಶ್ರೀನಿವಾಸ ಮಧುಶ್ರೀ




