ಮೊಳಕಾಲ್ಮೂರು : ರಾಜ್ಯ ಸರ್ಕಾರದಿಂದ ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಹಣ ಬಾಕಿ ಇದೆ. ಮುಂದಿನ ಎರಡು ಮೂರು ತಿಂಗಳ ಒಳಗಾಗಿ ಹಣವನ್ನು ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯದ್ಯಕ್ಷ ಆರ್ ಮಂಜುನಾಥ್ ರವರು ತಿಳಿಸಿದರು.
ಶ್ರೀ ನುಂಕೆ ಮಲೆ ಸಿದ್ದೇಶ್ವರ ಸ್ವಾಮಿ ಬೆಟ್ಟ ದೇವರಗುಡ್ಡ ದಲ್ಲಿ ಶುಕ್ರವಾರ ವಾರ್ಷಿಕ ಸಭೆ ನಡೆಯಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಜಿಎಸ್ಟಿ ಕಡಿತದಿಂದ ಗುತ್ತಿಗೆದಾರರಿಗೆ ಅನುಕೂಲವಾಗುತ್ತಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿ ಎಸ್ ಟಿ ಕಡಿತ ಮಾಡಿರುವುದು ಗುತ್ತಿಗೆದಾರರಿಗೆ ತುಂಬಾ ಅನುಕೂಲವಾಗಿ ಎಲ್ಲರಿಗೆ ಸಹಾಯವಾಗುತ್ತದೆ, ಮುಂದಿನ ದಿನಗಳಲ್ಲಿ ಗುತ್ತಿಗೆದಾರ ಬಾಕಿ ಇರುವ ಹಣವನ್ನು ಸೀನಿಯಾರಿಟಿ ಪ್ರಕಾರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಈ ಕುರಿತು ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು.
ಗುತ್ತಿಗೆದಾರರು ಪ್ರತಿಷ್ಠೆಗಳನ್ನು ಬಿಟ್ಟು ಪೈಪೋಟಿ ಮಾಡುವುದನ್ನು ಮೊದಲು ಕೈಬಿಡಬೇಕು, ಕೆಲವು ಕಡೆ ಪೈಪೋಟಿಗೆ ಇಳಿದು ಕಡಿಮೆ ದರಕ್ಕೆ ಬಿಡ್ ಮಾಡಿ ನಷ್ಟಕ್ಕಿಡಾಗುತ್ತಿರುವುದು ಹೆಚ್ಚಾಗುತ್ತಿದೆ. ಹೊಂದಾಣಿಕೆ ಮನೋಭಾವವನ್ನು ಮೈಗೂಡಿಸಿಕೊಂಡು ಎಲ್ಲರೂ ಸಮನಾಗಿ ಹಂಚಿಕೊಳ್ಳಬೇಕು. ಈ ತರಹ ಕೆಲಸ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಗುತ್ತಿಗೆದಾರರು ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬಿಏನ್ ಗೋವಿಂದಪ್ಪ. ಗುತ್ತಿಗೆದಾರರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಾದ ಖಾದರ್ ಕೂಡ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ತಾಲೂಕು ಅಧ್ಯಕ್ಷರಾದ ಬಿಎನ್ ಗೋವಿಂದಪ್ಪ ನಾಗಸಮುದ್ರ, ಸಂಘದ ಜಿಲ್ಲಾಧ್ಯಕ್ಷ ಕೆ ಮಲ್ಲೇಶ್, ತಾಲೂಕು ಗೌರವಾಧ್ಯಕ್ಷ ಎಸ್ ಖಾದರ್, ಉಪಾಧ್ಯಕ್ಷ ಕೆ ಬಸವರಾಜ್, ಕಾರ್ಯದರ್ಶಿ ಪಿ ವಿ ಅಶೋಕ್, ಸಹ ಕಾರ್ಯದರ್ಶಿ ಕೆಸಿ ಶ್ರೀನಿವಾಸ್, ಖಜಾಂಚಿ ಕೆ ಬಸಣ್ಣ, ಬಿಎಲ್ ತಿಪ್ಪೇಸ್ವಾಮಿ ನಿರ್ದೇಶಕರಾದ ಕೆ ತಿಪ್ಪೇಸ್ವಾಮಿ ಬಡೋಬ ನಾಯಕ,ಎಚ್ ರಾಜು, ಎಸ್ ಎಂ ನಾಗರಾಜ್, ಸಿ ಭಕ್ತ ಪ್ರಹ್ಲಾದ, ಪಿ ಪರಮೇಶ್ವರಪ್ಪ, ತಿಮ್ಮಣ್ಣ ಕೆಪಿ ಹೊನ್ನೂರಪ್ಪ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿ.ಎಂ. ಗಂಗಾಧರ




