Ad imageAd image

ಮುಂದಿನ ತಿಂಗಳಲ್ಲಿ ಹೊಸ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಆರಂಭ : ಕೆ. ಎಚ್ ಮುನಿಯಪ್ಪ 

Bharath Vaibhav
ಮುಂದಿನ ತಿಂಗಳಲ್ಲಿ ಹೊಸ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಆರಂಭ : ಕೆ. ಎಚ್ ಮುನಿಯಪ್ಪ 
WhatsApp Group Join Now
Telegram Group Join Now

ಉಡುಪಿ : ಹೊಸ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸ್ವೀಕಾರ, ವಿತರಣೆ ಪ್ರಕ್ರಿಯೆ ತಿಂಗಳಲ್ಲಿ ಆರಂಭಿಸಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಕೆ. ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಶುಕ್ರವಾರ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ರಾಜ್ಯದಲ್ಲಿ 7.70 ಲಕ್ಷ ಅನರ್ಹ ಕಾರ್ಡುಗಳಿವೆ ಈಗಾಗಲೇ ರಾಜ್ಯದಲ್ಲಿ 13 ಲಕ್ಷ ಅನರ್ಹ ಕಾರ್ಡುಗಳನ್ನು ಹುಡುಕಿ,ಪಟ್ಟಿ ಸಿದಪಡಿಸಿದೇವೆ.

ಅನರ್ಹ ಬಿಪಿಎಲ್ ಕಾರ್ಡುದಾರರಿದ್ದರೆ ಮುಂದೆ ಬಂದು ಕಾರ್ಡುಗಳನ್ನು ಎಪಿಎಲ್ ಮಾಡಿಸಬೇಕು. ಇದರಿಂದ ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾರ್ಡುಗಳನ್ನು ರದ್ದು ಮಾಡುವುದಿಲ್ಲ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್ ಗಳು ರಾಜ್ಯದಲ್ಲಿವೆ.

ಈ ಪೈಕಿ 4.50 ಕೋಟಿ ಜನರು ಫಲಾನುಭವಿಗಳಿದ್ದಾರೆ ಬಿಪಿಎಲ್ ಕಾರ್ಡ್ ಪರೀಕ್ಷರಣೆ ತೊಡಗಿದ್ದೇವೆ. ಅನರ್ಹರನ್ನು ಬಿಪಿಎಲ್ ನಿಂದ ಎಪಿಎಲ್ ಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಕಾರ್ಡುಗಳನ್ನು ರದ್ದು ಮಾಡುವುದಿಲ್ಲ ಸರ್ಕಾರದ ಮಾನದಂಡ ಬಿಟ್ಟು ಪರಿಷ್ಕರಣೆ ಮಾಡಲ್ಲ, ಹೊಸ ಬಿಪಿಎಲ್ ಕಾರ್ಡ್ದಾರರಿಗೆ ಅವಕಾಶ ಮಾಡಿಕೊಡಿ ಅನ್ನ ಭಾಗ್ಯ ಯೋಜನೆ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಅಂತ ಮನೆ ಕಟ್ಟುವವರಿಗೆ ಬಿಪಿಎಲ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ ಎಂದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!