Ad imageAd image

ಮಹಾರಾಷ್ಟ್ರಕ್ಕಿಂತ ಹೆಚ್ವಿನ ಬೆಲೆಗೆ ಒಣ ದ್ರಾಕ್ಷಿ ಮರಾಟ: ಡೊಂಗರಗಾವ

Bharath Vaibhav
ಮಹಾರಾಷ್ಟ್ರಕ್ಕಿಂತ ಹೆಚ್ವಿನ ಬೆಲೆಗೆ ಒಣ ದ್ರಾಕ್ಷಿ ಮರಾಟ: ಡೊಂಗರಗಾವ
WhatsApp Group Join Now
Telegram Group Join Now

ಐಗಳಿ: ಅಥಣಿ ತಾಲೂಕಿನ ಐಗಳಿ-ಕೋಹಳ್ಳಿ ಗ್ರಾಮದ ಕಲ್ಯಾಣ ನಗರದಲ್ಲಿ ಇರುವ ಅಥಣಿ ರೇಸೀನ್ ಪ್ರೋಸೆಸಗಸಿಂಗ್ ಕ್ಲಸ್ಟರ್ ಅಸೋಸಿಯೇಷನ್ ಇದರ 2024-25 ಸಾಲೀನ ವಾರ್ಷಿಕ ಸರ್ವ ಸಾಧಾರಣ ಸಭೆ ರವಿವಾರ ಜರುಗಿತು.


ಒಣ ದ್ರಾಕ್ಷಿ ಸಂಸ್ಕರಣೆ ಘಟಕದ ಸಭಾ ಭವನದಲ್ಲಿ 2024-25 ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಮಾಜಿ ಶಾಸಕ ಶಹಾಜಾಹಾನ ಡೊಂಗರಗಾವ ಅವರು ವಹಿಸಿ ಮಾತನಾಡಿ
ಅಥಣಿ ತಾಲೂಕಿನ ಐಗಳಿ- ಕೋಹಳ್ಳಿ ಗ್ರಾಮದಲ್ಲಿ ಇರುವ ಒಣ ದ್ರಾಕ್ಷಿ ಸಂಸ್ಕರಣೆ ಘಟಕದಲ್ಲಿ ಸುಮಾರು 707.72 ಟನ್ ಒಣ ದ್ರಾಕ್ಷಿ ಸಂಸ್ಕರಣೆ ಮಾಡಲಾಗಿತ್ತು.
ನಮ್ಮ ಒಣದ್ರಾಕ್ಷಿ ಸಂರಕ್ಷಣೆ ಘಟಕದಲ್ಲಿನ ಉತ್ಪಾದನೆ ಮಾಡಿದ ಮಾಲಿನ ದರ ಮಹಾರಾಷ್ಟ್ರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದ್ದು ರೈತರಿಗೆ ಅನೂಕೂಲವಾಗಿದೆ ಈ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದ್ರಾಕ್ಷಿ ಬೆಳೆಯ ಲಾಭವನ್ನು ಪಡೆದುಕೊಳ್ಳಬೇಕು.

ಈ ಘಟಕದಲ್ಲಿ ಉತ್ತಮ ಗುಣಮಟ್ಟ ಹಾಗೂ ಮೂಲಭತ ಸೌಕರ್ಯಗಳು ಹಾಗೂ ರೈತರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದ್ದು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕವಾಗಿ ಸಾಲ ಸೌಲಭ್ಯ ನೀಡಲಾಗುವುದು ಈ ಸಾಲಿನಲ್ಲಿ 2,44,642 ರೂ. ನಮ್ಮ ಸಂಘಕ್ಕೆ ಲಾಭವಾಗಿದೆ. ಕೇಂದ್ರ ಸರ್ಕಾರ ರೈತರಿಗೆ ದಸರಾ ಆಪರ್ ನೀಡಿದ್ದು 18% ರಿಂದ ಟ್ಯಾಕ್ಸ್ ೫% ಇಳಿಸಿದೆ ಇದರಿಂದ ರೈತ ವರ್ಗಕ್ಕೆ ಅನೂಕಲವಾಗಿದೆ ನಮ್ಮ ಸಂಘದ ಆಡಳಿತ ಮಂಡಳಿಯ ಹಾಗೂ ಸದಸ್ಯರ ಸಹಕಾರದಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭವಾಗಿದೆ ನಮ್ಮ ಸಂಘದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು

೨೦೨೪-೨೫ ವಾರ್ಷಿಕ ವರದಿಯನ್ನು ಸಂಘದ ಮಾರ್ಗದರ್ಶಕರಾದ ಎಮ್ ಎಲ್ ಹಾಲಳ್ಳಿಯವರು ಓದಿದರು ಒಣ ದ್ರಾಕ್ಷಿ ಸಂಕ್ಕರಣೆ ಘಟಕದಲ್ಲಿ ಹಿಂದಿನ ವರ್ಷ ನಮ್ಮ ಬಹಳಷ್ಟು ರೈತರು ಬೆಳೆದ ಮಾಲು ಹಾನಿಯಾಗಬಾರದೆಂಬ ಕಾರಣಕ್ಕೆ ನಮ್ಮ ಸಂಘದ ಸಿಬ್ಬಂದಿಗಳು ಅಳುಗಳು ತಾಂತ್ರಿಕ ವರ್ಗದವರು ತೀವ್ರ ನಿಗ ವಹಿಸಿ ಮಾಲು ಸಂರಕ್ಷಣೆಗೆ ಸ್ಟೋರ್ ನಲ್ಲಿ ಮಾಲು ಸಂಗ್ರಹಣೆಗೆ ಪ್ರಯತ್ನ ಮಾಡಿದ್ದಾರೆ ಈ ಹಿಂದೆ ಹಾನಿಯಾದರೂ ಸಹಿತ ಸಂರಕ್ಷಣೆ ಬಿಲ್ ಹೆಚ್ಚಿಸದೆ ಈ ವರ್ಷದ ಹಂಗಾಮಿನಲ್ಲಿ 190 ಜನ ರೈತರು ಒಟ್ಟು 707.72 ಒಣದ್ರಾಕ್ಷಿ ಸಂರಕ್ಷಣೆ ಮಾಡಲಾಗಿದೆ ಸುಮಾರು ೧೫೦ ಜನ ರೈತರ 592 ಒಣದ್ರಾಕ್ಷಿ ಸ್ಟೋರ್ ನಲ್ಲಿ ಸಂಗ್ರಹಣೆ ಮಾಡಲಾಗಿದೆ. ಸಾಲ ಮರುಪಾವತಿ ಹಾಗೂ ವಿದ್ಯುತ್ ಬಿಲ್ ಪಾವತಿ ಎರಡು ನೂರು ಲಕ್ಷ ಸಾಲ ಪಡೆಯಲಾಗಿತ್ತು ಈ ವರ್ಷ 22.2 ಲಕ್ಷ ಸಾಲ ಮರುಪೋತಿ ಮಾಡಲಾಗಿದ್ದು ಇದರಲ್ಲಿ 7.50 ಲಕ್ಷ ಬಡ್ಡಿ ಪಾವತಿಸಿ 3.36.55 ಲಕ್ಷ ಬಾಕಿ ಉಳಿದಿದೆ ಇದರ ಜೊತೆಗೆ ವಿದ್ಯುತ್ ಬಿಲ್ 2.52 ಲಕ್ಷಗಳ ಪಾವತಿಸಲಾಗಿದೆ.

ರೈತರಿಗೆ ಮುಂಗಡ ಹಣ ಅಡ್ವಾನ್ಸ್ ರೈತರ ಅನುಕೂಲಕ್ಕಾಗಿ ಹಾಗೂ ಸಂಘಕ್ಕೆ ಹೆಚ್ಚು ಮಾಲು ಬರಬೇಕೆಂಬುದೇಶಿ ದಿಂದ ಸದಸ್ಯರ ಆಗ್ರಾದ ಮೇರೆಗೆ ನಮ್ಮ ಸಂಘದಿಂದ 2024 25 ಸಾಲಿನಲ್ಲಿ ಸುಮಾರು 55 ಜನ ರೈತರಿಗೆ ಹಣಕಾಸು ವ್ಯವಸ್ಥೆ 186.56 ಲಕ್ಷ ನೀಡಲಾಗಿದೆ ರಸಗೊಬ್ಬರ ಮತ್ತು ಔಷಧಿ 90 ಜನರಿಗೆ ರೂ. 70 ಲಕ್ಷ ಉದ್ರಿ ನೀಡಲಾಗಿದೆ 145 ಜನ ರೈತರಿಗೆ 256.56 ಲಕ್ಷ ಅಡ್ವಾನ್ಸ್ ಕೊಡಲಾಗಿದೆ. ಮಹಾರಾಷ್ಟ್ರ ಕ್ಕಿಂತ ಇಲ್ಲಿ ೧% ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಅಡ್ವಾನ್ಸ್ ಕೂಡಲಾಗಿದೆ.

ಕೆಲವು ರೈತರು 2018-19 ರಿಂದ ಇಲ್ಲಿಯವರೆಗೆ 23 ರೈತರು 23. 87 ಲಕ್ಷ ಸಾಲ ಮರುಪಾವತಿ ಮಾಡದೆ ಕಟ್ಟ ಬಾಕಿದಾರರಾಗಿದ್ದಾರೆ ಇದರಿಂದಾಗಿ ಸಂಘಕ್ಕೆ ಹಣಕಾಸಿನ ತೊಂದರೆಯಾಗಿತ್ತು. ದಿನನಿತ್ಯ ವ್ಯವಹಾರಕ್ಕೆ ಅನಾನುಕೂಲ ಆಗುತ್ತಿದೆ ಕಟಬಾಕಿ ವಸೂಲಾತಿ ಸಂಸ್ಕರಣ ಸೇವಾ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ಗಂಭೀರವಾಗಿ ನಿರ್ಣಯ ಕೈಗೊಳ್ಳಲಾಗುವುದು ಎಲ್ಲ ಸದಸ್ಯರು ಸಹ ಮತ ವ್ಯಕ್ತ ಪಡಿಸಬೇಕೆಂದು ತಿಳಿಸಿದರು.

ಅದರಂತೆ ಯಂತ್ರೋಪಕರಣ ಕಚೇರಿ ಪೀಠೋಪಕರಣ ಹಾಗೂ ಇಮೆ ಪಾವತಿಸಲಾಗಿದೆ ಮತ್ತು ಹೊಸ ಕಾಮಗಾರಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಸ್ಥಳೀಯ ಕಾರ್ಮಿಕರಿಗೆ ಹಾಗೂ ಅನುಭವ ಕಾರ್ಮಿಕರಿಗೆ ಸಂರಕ್ಷಣೆ ಮಾಡಲು ಯೋಚಿಸಲಾಗಿದೆ 2024-25 ಸಾಲಿನಲ್ಲಿ ಸಂಘದಿಂದ 30 ಟನ್ ಒಣ ದ್ರಾಕ್ಷಿ ಮಾಲು ಖರೀದಿ ಮಾಡಲಾಯಿತು ಅಂದಾಜು 151 ಟನ್ ರೈತರಿಂದ ನೇರವಾಗಿ ಮಾರಾಟ ಮಾಡಲಾಯಿತು. ನೋಂದಣಿ ನವೀಕರಣ ಲೈಸೆನ್ಸ್ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲಾಗಿದೆ.

ಸಂಘದ ಸದಸ್ಯರಿಗೆ ಹಾಗೂ ಇತರ ದ್ರಾಕ್ಷಿ ಬೆಳಗಾರಿಗೆ ಅವಶ್ಯಕತೆ ಇರುವ ರಸಗೊಬ್ಬರ ಜೈವಿಕ ಗೊಬ್ಬರ ಔಷಧಿಗಳು ಡೀಪ್ ಆಯಿಲ್ ಹಾಗೂ ಕಾರ್ಬೋನೇಟ್ ಇತ್ಯಾದಿಗಳನ್ನು ಸೂಕ್ತ ದರದಲ್ಲಿ ಮಾರಾಟ ಮಾಡಲು ಐಗಳಿ ಗ್ರಾಮದಲ್ಲಿ ವ್ಯಾಪಾರ ಮಳೆಗೆಯನ್ನು ಪ್ರಾರಂಭಿಸಲಾಗಿದೆ ಇಲ್ಲಿವರೆಗೆ 107.42 ಲಕ್ಷ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸಿ ಎಸ್ ನೇಮಗೌಡ ಮಹೊನ್ ಹಿರೇಮನಿ ವಕೀಲರು ಮಾರ್ಗದರ್ಶಕರು ಎಮ್ ಎಲ್ ಹಾಲಳ್ಳಿ ಸಂಸ್ಥಾಪಕ ಉಪಾಧ್ಯಕ್ಷರಾದ ಪ್ರಕಾಶ ಪಾಟೀಲ್ ನಿರ್ದೇಶಕರಾದ ಕಾಶಿರಾಮ ಕುಂಬಾರಕರ ನೂರ ಅಹ್ಮದ ಡೊಂಗರಗಾಂವ ರುದ್ರಗೌಡ ತೆಲಸಂಗ ಈರಗೌಡ ಪಾಟೀಲ ಅಪ್ಪಸಾಬ ಮಾಕಾಣಿ ರಿಯಾಜ ಡೊಂಗರಗಾವ ಗುರುಪಾದ ಚೌಗಲಾ ಕಾರ್ಯದರ್ಶಿ ದಸ್ತಗೀರ ಕೊರಬು ಹಾಗೂ ಸದಸ್ಯರಾದ ಬಸವಂತಪ್ಪಾ ಗುಡ್ಡಾಪೂರ ಘಟಿವಾಳಪ್ಪ ಗುಡ್ಡಾಪೂರ ಅಪ್ಪಸಾಬ ಪಾಟೀಲ ಗುರಪ್ಪ ಬಿರಾದರ ಜಗದೇಶ ತೆಲಸಂಗ ಬಸವರಾಜ ಬಿರಾದರ ದುಡಪ್ಪ ದೂಡ್ಡಮನಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತಿ ಇದ್ದರು ಶಿವಾನಂದ ಸಿಂಧೂರ ಸ್ವಾಗತಿಸಿದರು ಗಣೇಶ ಪೂಜಾರಿ ವಕೀಲರು ವಂದಿಸಿದರು.

ವರದಿ:ಆಕಾಶ ಎಮ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!