ಸಂಗಮ ಸೇತುವೆ ತುಂಬಲು ಬರಿ 6 ಅಡಿ ಮಾತ್ರ ಬಾಕಿ
ಭಾಲ್ಕಿ : ಕಳೆದ್ ಎರಡು ತಿಂಗಳುಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ
ನಮ್ಮಲ್ಲಿನ ಕಾರಂಜಾ ಡ್ಯಾಮ ಹಾಗೂ ಪಕ್ಕದ ಮಹಾರಾಷ್ಟ್ರದ ತೆರ್ನಾ ನದಿಯ ಧನೇಗಾಂವ ಡ್ಯಾಮ ದಿಂದ ಹರಿದು ಬರುತ್ತಿರುವ ನೀರಿನಿಂದ ಕರ್ನಾಟಕದ ಗಡಿ ಭಾಗ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಸಾಧಿಸುವ ಸಂಗಮ ಸೇತುವೆ ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ.

ನದಿಯ ದಡದಲ್ಲಿ ಇರುವ ನೂರಾರು ಹಳ್ಳಿಗಳ ಸ್ಥಿತಿ ಚಿಂತಾಜನಕವಾಗಿದೆ ರೈತರು ತಮ್ಮ ಹೊಲದಲ್ಲಿನ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ, ಸರ್ಕಾರ ಈ ಕಡೆ ಗಮನ ಹರಿಸಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಇಡಾದ ರೈತಾಪಿ ವರ್ಗಕ್ಕೆ ಸಹಾಯ ಹಸ್ತ ನೀಡಬೇಕು ಮಹಾರಾಷ್ಟ್ರದಲ್ಲಿ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಘೋಷಣೆ ಮಾಡಿದಂತೆ ನಮ್ಮ ಜನಪ್ರತಿನಿಧಿಗಳು ರೈತರ ಉಳಿವಿಗಾಗಿ ಕನಿಷ್ಠ 25 ಸಾವಿರ ಪ್ರತಿ ಎಕರೆಗೆ ನೀಡಬೇಕು ಹಾಗೂ ಮನೆ, ಅಸ್ತಿಪಾಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಎಂದು ಸ್ಥಳೀಯರು ಅಗ್ರಹ ಮಾಡಿದರು.
ವರದಿ:ಸಂತೋಷ ಬಿಜಿ ಪಾಟೀಲ




