ಗೋಕಾಕ: ಪಕ್ಕದ ಮನೆಗಳಿಗೆ ಮರದ ಟೊಂಗೆ ಹತ್ತಿದ್ದಕ್ಕೆ ಸರಕಾರಿ ಶಾಲೆಯಲ್ಲಿನ ಮರಗಳನ್ನೆ ಕಟಾವು ಮಾಡಿಸಿದ ಘಟನೆ ಮೂಡಲಗಿ ತಾಲೂಕಿನ ದುರದುಂಡಿ ಗ್ರಾಮದಲ್ಲಿ ನಡೆದಿದೆ.
ಮೂಡಲಗಿ ತಾಲೂಕಿನ ದುರದುಂಡಿ ಗ್ರಾಮದ ಮಹಾಂತೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಉಪ್ಪಾರ ಇವರು ಶಾಲಾ ಆವರಣ ಗೊಡೆಯ ಪಕ್ಕದಲ್ಲಿರುವ ಮನೆಗಳಿಗೆ ಮರಗಳ ಟೊಂಗೆ ಹತ್ತಿವೆ ಎಂದು ಹೇಳಿದ ತಕ್ಷಣ ಯಾರನ್ನು ವಿಚಾರಿಸದೆ ಟೊಂಗೆ ಕಟಾವು ಮಾಡಿಸದೆ ಮರಗಳನ್ನೆ ಕಟಾವು ಮಾಡಿಸಿದ್ದಾನೆ.
ಯಾವುದೆ ಒಂದು ಮರ ಕಟಾವು ಮಾಡಿಸಬೇಕಾದರೆ ಅರಣ್ಯ ಇಲಾಖೆ,ಕ್ಷೇತ್ರ ಶಿಜ್ಷಣಾಧಿಕಾರಿಗಳ ಅನುಮತಿ ಪಡೆಯದೆ ಕಟಾವು ಮಾಡಿಸಿದ್ದ ಕಾರಣ ಮುಖ್ಯ ಶಿಕ್ಷಕ ಉಪ್ಪಾರ ಇವರ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಮೂಡಲಗಿ ಬಿಇಓ ಗೆ ತಿಳಿಸಿದರು ಸಹ ಸ್ಥಳಕ್ಕೆ ಬಾರದೆ ಜಾತಿಗಣತಿಯ ಉಡಾಪೆ ಸಬೂಬು ಹೇಳುತಿದ್ದಾರೆಂದು ಸ್ಥಳಿಯರು ಆರೋಪಿಸಿದ್ದಾರೆ.
ವರದಿ: ಮನೋಹರ ಮೇಗೇರಿ




