Ad imageAd image

ಪುನ: ಆರಂಭಗೊಂಡ ರೈಲ್ವೆ ಸ್ಟೇಷನ್ ಹೋಟೆಲ್

Bharath Vaibhav
ಪುನ: ಆರಂಭಗೊಂಡ ರೈಲ್ವೆ ಸ್ಟೇಷನ್ ಹೋಟೆಲ್
WhatsApp Group Join Now
Telegram Group Join Now

ಭಾಲ್ಕಿ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಚಹಾ ತಿಂಡಿಗೆ ಅನುಕೂಲವಗಲೆಂದು ಒಂದು ಹೋಟೆಲ್ ಇರುವುದು ಸರ್ವೇಸಾಮಾನ್ಯ. ರೈಲ್ವೆ ಪ್ರಯಾಣ ಅಂದಮೇಲೆ ಒಂದು ಹೋಟೆಲ್ ಇರ್ಲೇಬೇಕು ಅಲ್ಲವೇ. ಆದರೆ ಭಾಲ್ಕಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಕಳೆದ ಎರಡು ತಿಂಗಳಿಂದ ಟೆಂಡರ್ ಆಗದೆ ನೆನೆಗುದಿಗೆ ಬಿದ್ದ ಹೋಟೆಲ್ ಮುಚ್ಚಲಾಗಿತ್ತು ಇದರಿಂದ ಸಂಚರಿಸುವ ಪ್ರಯಾಣಿಕರಿಗೆ ಒಂದು ನೀರಿನ ಬಾಟಲಿ ಒಂದು ಚಹಾ ಕೂಡ ಸಿಗದ ಸ್ಥಿತಿ ಉದ್ಭವವಾಗಿ ತುಂಬಾ ಕಷ್ಟವಾಗುತ್ತಿತ್ತು. ಇದನ್ನು ಅರಿತ ಭಾಲ್ಕಿ ರೈಲ್ವೆ ನಿಲ್ದಾಣದ ಸೆಂಟ್ರಲ್ ರೈಲ್ವೆ ವ್ಯವಸ್ಥಾಪನಾ ಸದಸ್ಯರುಗಳಾದ ದಿಲೀಪ್ ತೇಲಂಗ, ಉತ್ತಮ ಪುರಿ, ಶಹುರಾಜ್ ಪವಾರ್, ಅನೀಲ್ ಜಾಧವ್, ಸತೀಶ್ ನಾಯಕ್ ಅವರುಗಳೆಲ್ಲ ಸೇರಿ ಸಿಕಿಂದ್ರಾಬಾದ್ ಮುಖ್ಯ ಕಚೇರಿಗೆ ಹೋಗಿ ಇಲ್ಲಿರುವ ಪರಿಸ್ಥಿತಿಯನ್ನು ಸೌಥ ಸೆಂಟ್ರಲ್ ಮುಖ್ಯ ಅಧಿಕಾರಿಳಿಗೆ ಮನವರಿಕೆ ಮಾಡಿಕೊಟ್ಟು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಅದರ ಫಲಶ್ರುತಿಯಾಗಿ ಇಂದು ಟೆಂಡರ ಮುಖೇನ ಪುನ: ಹೋಟೆಲ್ ಮರು ಉದ್ಘಾಟನೇ ಆಗಿ ಸಾರ್ವಜನಿಕರ ಸೇವೆಗೆ ಸಿದ್ದವಾಗಿದೆ. ಈ ಸಂದರ್ಭದಲ್ಲಿ ಸೌಥ ಸೆಂಟ್ರಲ ರೈಲ್ವೆ ವ್ಯವಸ್ಥಾಪನಾ ಸದಸ್ಯರಾದ ದಿಲೀಪ್ ತೆಲಂಗ ಮಾತನಾಡಿ ಜನಸಾಮಾನ್ಯರಿಗಾಗಿ ರೈಲ್ವೆ ನಿಲ್ದಾಣದ ಪರಿಸರದಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಮಾಡಿಕೊಡಲಾಗುವುದು. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ನಮ್ಮನ್ನು ಸಂಪರ್ಕಿಸಿ ಎಂದು ನುಡಿದರು.

ವರದಿ: ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!