ಚಿಕ್ಕಮಗಳೂರು: ಫಿಲಿಫೈನ್ಸ್ ನಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿಯ ಆತಂಕವೂ ಎದುರಾಗಿದೆ. ಮೆಡಿಕಲ್ ಓದಲು ತೆರಳಿದ್ದ ಚಿಕ್ಕಮಗಳೂರಿನ ವಿದ್ಯಾರ್ಥಿಯೊಬ್ಬಳು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ವರದಿಯಾಗಿದೆ.
ಐಶ್ವರ್ಯ ಎಂಬ ವಿದ್ಯಾರ್ಥಿನಿ ಸಿಬು ನಗರದಲ್ಲಿ ಸಿಲುಕಿದ್ದು ವಾಪಸ್ ಬರಲಾಗದೆ ಪರದಾಡುತ್ತಿರುವ ಬಗ್ಗೆ ವರದಿಯಾಗಿದೆ.ಮಗಳನ್ನ ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರ-ರಾಜ್ಯ ಸರ್ಕಾರಕ್ಕೆ ಪೋಷಕರು ಮನವಿ ಮಾಡಿದ್ದಾರೆ.
ಐಶ್ವರ್ಯ ಐದು ವರ್ಷದ ಮೆಡಿಕಲ್ ಕೋರ್ಸ್ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.ಭಾರತೀಯ ವಿದ್ಯಾರ್ಥಿಗಳು ಊಟ-ತಿಂಡಿ-ನೀರು ಯಾವುದೂ ಸಿಗದೇ ಆತಂಕದಲ್ಲಿದ್ದಾರೆ ಎಂದು ವರದಿಯಾಗಿದೆ.




