ಅಹ್ಮದಾಬಾದ್: ಭಾರತ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಮೊದಲ ಅವಧಿಯ ಆಟದಲ್ಲೇ ಇನ್ನಿಂಗ್ಸ್ ಮುನ್ನಡೆ ಪಡೆಯಲು ಯಶಸ್ವಿಯಾಗಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎರಡನೇ ದಿನ ಭೋಜನ ವಿರಾಮಕ್ಕೂ ಮುಂಚಿನ ಆಟದಲ್ಲಿ 2 ವಿಕೆಟ್ ಗೆ 183 ರನ್ ಗಳಿಸಿರುವ ಭಾರತ ತಂಡವು 21 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದು, ಇನ್ನು ತನ್ನ ಬಳಿ ಎಂಟು ವಿಕೆಟ್ ಗಳನ್ನು ಹೊಂದಿದ್ದು, ಬೃಹತ್ ಇನ್ನಿಂಗ್ಸ್ ಮುನ್ನಡೆಯತ್ತ ದಾಪುಗಾಲು ಹಾಕಿದೆ.
ಕೆ.ಎಲ್. ರಾಹುಲ್ 80 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ನಾಯಕ ಶುಭಮಾನ್ ಗಿಲ್ 49 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಇದಕ್ಕೆ ಮುನ್ನ ಯಶಸ್ವಿ ಜೈಸ್ವಾಲ್ 36 ಹಾಗೂ ಸಾಯಿ ಸುದರ್ಶನ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 162
ಭಾರತ ಮೊದಲ ಇನ್ನಿಂಗ್ಸ್ 2 ವಿಕೆಟ್ ಗೆ 183
ಕೆ.ಎಲ್. ರಾಹುಲ್ 80 ( 167 ಎಸೆತ, 10 ಬೌಂಡರಿ)
ಶುಭಮಾನ್ ಗಿಲ್ 49 (90 ಎಸೆತ, 5 ಬೌಂಡರಿ)




