————————————————ಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದ ಭಾರತ

ಅಹ್ಮದಾಬಾದ್: ಧ್ರುವ್ ಜರೇಲ್, ಕೆ.ಎಲ್. ರಾಹುಲ್ ಹಾಗೂ ರವೀಂದ್ರ ಜಡೆಜಾ ಅವರುಗಳ ಆಕರ್ಷಕ ಶತಕಗಳ ನೆರವಿನಿಂದ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಾಂತ್ಯಕ್ಕೆ 5 ವಿಕೆಟ್ ಗೆ 448 ರನ್ ಗಳಿಸಿದ್ದು, 286 ರನ್ ಗಳ ಇನ್ನಿಂಗ್ಸ್ ಮುನ್ನಡೆ ಗಳಿಸಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯದ ಮೇಲೆ ಭಾರತ ಎರಡನೇ ದಿನ ಮುಗಿಯುವಷ್ಟರಲ್ಲಿಯೇ ಸಂಪೂರ್ಣ ಹಿಡಿತ ಸಾಧಿಸಿದ್ದು, ಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದೆ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 162
ಭಾರತ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 448
ಕೆ.ಎಲ್. ರಾಹುಲ್ 100 ( 197 ಎಸೆತ, 12 ಬೌಂಡರಿ, ಧ್ರುವ್ ಜುರೇಲ್ 125 (210 ಎಸೆತ, 15 ಬೌಂಡರಿ, 3 ಸಿಕ್ಸರ್)
ರವೀಂದ್ರ ಜಡೆಜಾ ಬ್ಯಾಟಿಂಗ್ 104 ( 176 ಎಸೆತ, 6 ಬೌಂಡರಿ, 5 ಸಿಕ್ಸರ್)




