ರಾಯಚೂರು: ಗ್ರಾಮೀಣ ಕ್ಷೇತ್ರದ ಜನತೆಗೆ ನಮ್ಮ ನಾಡ ಹಬ್ಬ ವಿಶ್ವ ವಿಖ್ಯಾತ ದಸರಾ ಹಬ್ಬದ ಹಾರ್ದಿಕ ಶುಭಾಶಯ ಕೋರಿ ಹಿರಪುರ ಗ್ರಾಮದಲ್ಲಿ ಕಲ್ಯಾಣ ಮಂಟಪ ಕಾಂಪೌಂಡ್ ಕಾಮಗಾರಿಗೆ ಚಾಲನೆ ಬಸನಗೌಡ ದದ್ದಲ್
ಶಾಸಕರು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸನಗೌಡ ದದ್ದಲ್ ರವರು ಹಿರಪುರ ಗ್ರಾಮದಲ್ಲಿ ಕೆ ಕೆ ಆರ್ ಡಿ ಬಿ ಮೈಕ್ರೋ ಯೋಜನೆ ಅಡಿ ಕಲ್ಯಾಣ ಮಂಟಪ ನಿರ್ಮಾಣ. ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶೆಡ್ ನಿರ್ಮಾಣ. ದೇವಮ್ಮ ದೇವಸ್ಥಾನಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಮಾಡಲಾಯಿತು.
ಹಿರಪುರ್ ಗ್ರಾಮದ ಜನರ ತಾವೇ ಖುದ್ದಾಗಿ ಕಲ್ಯಾಣ ಮಂಟಪ ಕಾಗಿ ಗ್ರಾಮಸ್ಥರೆಲ್ಲರೂ ಹಣವನ್ನು ಸಂದಾಯಿಸಿಕೊಂಡು ಸ್ಥಳ ಖರೀದಿ ಮಾಡಿರುವುದು ನನಗೆ ಬಹಳ ಸಂತೋಷದ ವಿಷಯವೆಂದು ಶಾಸಕರು ತಿಳಿಸಿದರು. ಮತ್ತು ಈ ಗ್ರಾಮದಲ್ಲಿ ಹೈಸ್ಕೂಲಿಗಾಗಿ ತಾವೇ ಊರಿನ ಎಲ್ಲರೂ ಸೇರಿಕೊಂಡು ಸ್ಥಳವನ್ನು ಖರೀದಿಸಿಕೊಂಡು ಹೈಸ್ಕೂಲಿಗೆ ಕೊಟ್ಟಿರುತ್ತೀರಿ ತಮಗೆ ನಾನು ಕ್ಷೇತ್ರದ ಪರವಾಗಿ ಗ್ರಾಮಸ್ಥರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಗ್ರಾಮಸ್ಥರಿಗೆ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಾರಲ ದಿನ್ನಿ ವೀರನ ಗೌಡ




