ಭಟ್ಕಳ :ಕಾನಿಪ ಧ್ವನಿ ಭಟ್ಕಳ ಘಟಕದಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ,ಪತ್ರಕರ್ತರ ಸಮಾಗಮ. ರಾಜ್ಯ ಪ್ರಶಸ್ತಿ ಪ್ರಧಾನ 2026 ನೇ ಇಸವಿ ಜನವರಿ 28 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದಲ್ಲಿ ಕಾನಿಪ ಧ್ವನಿ ವತಿಯಿಂದ ಪತ್ರಕರ್ತರ ರಾಜ್ಯ ಮಟ್ಟದ ವಿಚಾರ ಸಂಕಿರಣ,ಪತ್ರಕರ್ತರ ಸಮಾಗಮ ಹಾಗೂ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಅರ್ಥಪೂರ್ಣ ಸಮಾರಂಭದ ಉಧ್ಘಾಟನೆಯನ್ನು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಸಂತೋಷ ಹೆಗಡೆ ಯವರು ನೆರವೇರಿಸುವರು,ಮುಖ್ಯ ಅತಿಥಿಗಳಾಗಿ ಟಿ.ಎಸ್.ಆರ್ ಪ್ರಶಸ್ತಿ ವಿಜೇತರು ನಾಡಿನ ಹಿರಿಯ ಪತ್ರಕರ್ತರಾದ ಮಾನ್ಯ ಗಂಗಾಧರ ಮೊದಲಿಯಾರ್,ಗ್ಯಾರೆಂಟಿ ನ್ಯೂಸ್ ಚಾನಲ್ ನ ಮುಖ್ಯಸ್ಥರು ಸಂಪಾದಕರಾದ ಶ್ರೀಮತಿ ರಾಧ ಹಿರೇಗೌಡರ್,ಕನ್ನಡ ಪ್ರಭ ದಿನ ಪತ್ರಿಕೆಯ ಹಿರಿಯ ಪತ್ರಕರ್ತರಾದ ಜಗಳೂರು ಲಕ್ಷ್ಮಣರಾವ್, ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು,ಹಿರಿಯ ಅಧಿಕಾರಿಗಳು,ಸಾಹಿತಿಗಳು,ಹಲವಾರು ಸಂಘಟನೆಯ ಮುಖಂಡರುಗಳು ಹಾಗೂ ಇನ್ನೀತರ ಪ್ರಮುಖರು ಭಾವಹಿಸಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಮಗೆಲ್ಲಾ ಹೃದಯ ಪೂರ್ವಕ ಸ್ವಾಗತ ಕೋರುವ. (ಭಟ್ಕಳ ದಿಂದ ಕೇವಲ 15 ರಿಂದ 20 ಕಿಲೋಮೀಟರ್ ಒಳಗಡೆ ಐತಿಹಾಸಿಕ ದೇವಸ್ಥಾನಗಳಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನ,ಇಡುಗುಂಜಿ ಗಣಪತಿ,ಭೈಂದೂರು ಸೋಮೇಶ್ವರ ದೇವಸ್ಥಾನ ಹಾಗೂ ಮುರುಡೇಶ್ವರ ದೇವಸ್ಥಾನ ಗಳನ್ನು ದರ್ಶನ ಪಡೆಯಬಹುದು.
ಕರಾವಳಿ ವಿಭಾಗದ ಅಧ್ಯಕ್ಷರು ಹಾಗೂ ಭಟ್ಕಳ ದ ಅಧ್ಯಕ್ಷರು ಪದಾಧಿಕಾರಿಗಳು ಅರ್ಜುನ ನಾಯಕ,ಕುಮಾರ ನಾಯಕ,ರಮೇಶ್ ಹಾಗೂ ಉಲ್ಲಾಸ ಶಾನಭಾಗ ಭಾಗವಹಿಸಿದ್ದರು.
ವರದಿ :ರಾಜು ಮುಂಡೆ




