Ad imageAd image

ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪನೆ :ಸಿದ್ದರಾಮಯ್ಯ ಘೋಷಣೆ

Bharath Vaibhav
ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪನೆ :ಸಿದ್ದರಾಮಯ್ಯ ಘೋಷಣೆ
WhatsApp Group Join Now
Telegram Group Join Now

ಬೆಂಗಳೂರು : ಜ್ಞಾನ ಎನ್ನುವುದು ಯಾರ ಅಪ್ಪನ ಮನೆಯ ಸ್ವತ್ತಲ್ಲ ಎಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯ ಆಗುತ್ತಿತ್ತಾ?ಬೆಸ್ತರ ಜಾತಿಯಲ್ಲಿ ಹುಟ್ಟಿದವರು ಮಹಾಭಾರತ ಬರೆಯಲು ಆಗುತ್ತಿತ್ತ? ಎಂದು ಪ್ರಶ್ನಿಸಿದರು.

ಎಲ್ಲರಿಗೂ ಸಮಾನವಾದ ಅವಕಾಶ ಸಿಕ್ಕರೆ ಸಮಾನವಾಗಿ ಬೆಳೆಯುತ್ತಾರೆ. ನಮ್ಮದು ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆ. ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಬಂದರೆ ಇದಕ್ಕೆ ಚಲನೆ ಬರುತ್ತದೆ.

ಅದಕ್ಕಾಗಿ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವಂತೆ ಬೇಡಿಕೆ ಇಟ್ಟಿದ್ದೀರಿ ಅದನ್ನು ಮುಂದಿನ ವರ್ಷದಿಂದ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ನಾನು ರಾಜಕೀಯದಲ್ಲಿ ಏನು ಮಾತು ಕೊಡುತ್ತೇನೋ ಆ ಕೆಲಸ ಮಾಡುತ್ತೇನೆ. ಮೆಟ್ರೋ ಯೋಜನೆ ನಾವು ಮತ್ತು ಕೇಂದ್ರ ಸರ್ಕಾರ ಸೇರಿ ಮಾಡಿರುವುದು. ಮೆಟ್ರೋದಲ್ಲಿ ರಾಜ್ಯದ ಪಾಲು ಹೆಚ್ಚಿದೆ ಶೇ.87 ರಷ್ಟು ನಮ್ಮ ಪಾಲಿದೆ. ಮೆಟ್ರೋ ಯೋಜನೆಗೆ ಬಸವಣ್ಣನ ಹೆಸರಿಡುವ ಕೇಂದ್ರ ಸರ್ಕಾರದ ಜೊತೆಗೆ ಮಾತನಾಡುತ್ತೇನೆ. ಬಸವಣ್ಣನ ಹೆಸರಿಡುವ ಬಗ್ಗೆ ನೀವು ನನಗೆ ಹೇಳಬೇಕಾಗಿಲ್ಲ ಮೆಟ್ರೋ ನಮ್ಮದೊಂದೇ ಯೋಜನೆಯಾಗಿದ್ದರೆ ಈಗಲೇ ಒಪ್ಪಿಗೆ ಕೊಡುತ್ತಿದ್ದೆ ಎಂದು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!