ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಶತಮಾನೋತ್ಸವದ ಅಂಗವಾಗಿ ಹುಬ್ಬಳ್ಳಿಯಲ್ಲಿ ಬಹಳ ವಿಜೃಂಭಣೆಯಿಂದ ದಿನಾಂಕ 05 10 2025 ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಸ್ವಯಂಸೇವಕರಿಂದ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ನೆಹರು ಮೈದಾನದಿಂದ ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಸೇವಕರು ಪಥಸಂಚಲವನ್ನು ನಡೆಸಿದರು.
ಈ ಒಂದು ಭವ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿಯ ಸುತ್ತಮುತ್ತಲಿನ ಲಕ್ಷಾಂತರ ಜನ ಸೇರಿದ್ದರು ಪಥ ಸಂಚಲನವು ಮೊದಲನೇ ವಿಭಾಗ ನೆಹರು ಮೈದಾನದಿಂದ ಕೃಷ್ಣ ಭವನ , ಸಿದ್ದಪ್ಪ ಕಂಬಳಿ ಮಾರ್ಗವಾಗಿ , ದಾಜಿಬಾನ ಪೇಟೆಯ ತುಳಜಾಭವಾನಿ ದೇವಸ್ಥಾನದ ವೃತ್ತದ ಕಡೆಗೆ ತಿರುಗಿ ದುರ್ಗದ ಬೈಲ ಮಾರ್ಗದಿಂದ ಎರಡನೇ ವಿಭಾಗಕ್ಕೆ ಸಂಗಮವಾಗಿ ಬ್ರಾಡವೆ ಮಾರ್ಗವಾಗಿ ಕೊಪ್ಪಿಕರ್ ರಸ್ತೆಯಿಂದ ಮತ್ತೆ ಸರ್ ಸಿದ್ದಪ್ಪ ಕಂಬಳಿ ವೃತ್ತದಿಂದ ತಿರುಗಿ ನೆಹರು ಮೈದಾನದಲ್ಲಿ ಪಥಸಂಚಲನವನ್ನು ಮುಕ್ತಾಯಗೊಳಿಸಿ ಮುಂದಿನ ಕಾರ್ಯಕ್ರಮದಲ್ಲಿ ತೊಡಗಿದರು.

ಈ ಒಂದು ಸಂದರ್ಭದಲ್ಲಿ ಪಥಸಂಚನದಲ್ಲಿ ತೊಡಗಿದ್ದ ಕರಸೇವಕರಿಗೆ ನೆರೆದಂತ ಜನ ಹೂ ಪುಷ್ಪಾರ್ಚನೆ ಮಾಡುವುದರೊಂದಿಗೆ ತಮ್ಮ ದೇಶಾಭಿಮಾನವನ್ನು ಮೆರೆದರು ಪತ ಸಂಚಲನ ನಡೆಯುತ್ತಿದ್ದ ಪ್ರತಿಯೊಂದು ಕಡೆಯೂ ಒಂದೇ ಮಾತರಂ ಬೋಲೋ ಭಾರತ್ ಮಾತಾ ಕೀ ಜಯ್ . ಜೈ ಶ್ರೀ ರಾಮ್ ಜೈ ಶಿವಾಜಿ ಜೈ ಭವಾನಿ ಘೋಷಣೆಗಳು ಕೇಳುತ್ತಿದ್ದವು ಪಥಸಂಚನದಲ್ಲಿ ಪುಟ್ಟ ಪುಟ್ಟ ಕಂದಮ್ಮಗಳ ಸಹಿತ ಮುಪ್ಪಾಗಿರುವ ಅಜ್ಜಂದಿರು ಸ್ವಯಂ ಸೇವಕರಿಗೆ ಪ್ರೋತ್ಸಾಹಿಸುತ್ತಿದ್ದರು. ಈ ಒಂದು ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು ಎನ್ನುವ ಆಶಾಭಾವನೆ ನೆರೆದಿಟ್ಟು.
ವರದಿ: ಗುರುರಾಜ ಹಂಚಾಟೆ




