Ad imageAd image

ಕುಸ್ತಿ : ಆರೇ ನಿಮಿಷದಲ್ಲಿ ಆಕಾಶ ತೋರಿಸಿದ ಪ್ರಕಾಶ ಬಣಕರ

Bharath Vaibhav
ಕುಸ್ತಿ : ಆರೇ ನಿಮಿಷದಲ್ಲಿ ಆಕಾಶ ತೋರಿಸಿದ ಪ್ರಕಾಶ ಬಣಕರ
WhatsApp Group Join Now
Telegram Group Join Now

ನಿಪ್ಪಾಣಿ   : ಮೈಸೂರಿನ ನಂತರ ದ್ವಿತೀಯ ಕ್ರಮಾಂಕದಲ್ಲಿ ಆಚರಿಸುವ ಗಡಿಭಾಗದ ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಸಿದ್ದೇಶ್ವರ ದಸರಾ ಮಹೋತ್ಸವದ ಕೊನೆಯ ದಿನ ಸಿದ್ದೇಶ್ವರ ಮೈದಾನದಲ್ಲಿ 50,000 ಕುಸ್ತಿ ರಸಿಕರ ಮಧ್ಯೆ ಪ್ರಥಮ ಕ್ರಮಾಂಕದ ಕುಸ್ತಿ ಉಪ ಮಹಾರಾಷ್ಟ್ರ ಕೇಸರಿ ಮಲ್ಲ ಪ್ರಕಾಶ್ ಬನಕರ ವಿರುದ್ಧ ಬ್ರಾಜಿಲ್ ಅಂತರಾಷ್ಟ್ರೀಯ ಮಲ್ಲ ಫೆಡರೇಲಾ ಲಿಮಾ ಅವರ ಮದ್ಯ ನಡೆದು ಕೇವಲ ಆರೇ ನಿಮಿಷದಲ್ಲಿ ಪ್ರಕಾಶ್ ನನ್ನ ಎದುರಾಳಿ ಲಿಮಾ ನಿಗೆ ಆಕಾಶ ತೋರಿದರು. ಪ್ರಾರಂಭದಲ್ಲಿ ಕುಸ್ತಿ ಕಮಿಟಿ ಅಧ್ಯಕ್ಷ ಸುನಿಲ್ ನಾರೆ ಪ್ರಣವ್ ಪಾಟೀಲ್ ಸಂದೀಪ್ ಪಾಟೀಲರ ಉಪಸ್ಥಿತಿಯಲ್ಲಿ ಮೈದಾನ ಪೂಜೆ ನಡೆಯಿತು. ತದನಂತರ ಚಿಕ್ಕ ಕುಸ್ತಿಗಳು ಪ್ರೇಕ್ಷಕರ ಮನಸೆಳೆದವು.

 

ಒಂದೆಡೆ ಬಜರಂಗ ಅಬ್ದಾಗಿರಿ ಅವರ ಹಲಿಗೆವಾದನ ಹಾಗೂ ಸಿದ್ದೇಶ್ವರ ಬ್ಯಾಂಡ್ ಕಂಪನಿಯ ವಾದ್ಯದೊಂದಿಗೆ ಅಕಾಡ ದಲ್ಲಿಯ ಮಲ್ಲರಿಗೆ ಸೆಣಸಾಟಕ್ಕೆ ಹುರಿದುಂಬಿಸುತ್ತಿದ್ದರೆ.

ಇನ್ನೊಂದೆಡೆ 10 ಕ್ರಮಾಂಕದವರೆಗಿನ ಖ್ಯಾತ ಅಂತರಾಷ್ಟ್ರೀಯ ಮಲ್ಲರ ಸೆನಸಾಟ ನೋಡುಗರ ಹುಬ್ಬೇ ರಿಸುವಂತಿತ್ತು. ಅಂತರಾಷ್ಟ್ರೀಯ ಕುಸ್ತಿಗಳಲ್ಲಿ ದ್ವಿತೀಯ ಕ್ರಮಾಂಕದ ಕುಸ್ತಿ ಮಾವುಲಿ ಕೊಕಾಟೆ, ತೃತೀಯ ಕ್ರಮಾಂಕ ಸುಭೋದ ಪಾಟೀಲ್, 4ನೇ ರಾಘು ಟೊ0ಬರೆ, 5ನೇ ಕ್ರಮಾಂಕ ಪ್ರಕಾಶ್ ಇಂಗಳಗಿ ಆರನೇ ಕ್ರಮಾಂಕ ಕಾರ್ತಿಕ್ ಏಳನೇ ಕ್ರಮಾಂಕ ಪವನ್ ಚಿಕ್ಕದಿನಕೊಪ್ಪಿ, 8ನೇ ಕ್ರಮಾಂಕ ಭೀಮ ಪುತ್ರ ಮುತಗಾ, 9ನೇ ಕ್ರಮಾಂಕ ಪ್ರದೀಪ್ ಅನುಶೆ ಹಾಗೂ 10ನೇ ಕ್ರಮಕ ಸರ್ಜರಾವ್ ಚಿಮ್ಮಡ ಅವರ ಕುಸ್ತಿಗಳು ಜನಮನ ಸೆಳೆದವು.

ಇದು ಅಲ್ಲದೆ ಮನೋರಂಜನೆ ಕುಸ್ತಿ ಅಯೋಧ್ಯ ಭಜರಂಗ್ ಅಕಾಡ ಮಲ್ಲ ಬಾಬಾ ಲಾಡಿ ಹಾಗೂ ಕಾಲ ಪಂಜಾಬಿ ಅವರ ಕುಸ್ತಿ ತುಂಬಿದ ಪ್ರೇಕ್ಷಕರನ್ನು ಮನರಂಜಿಸಿತು.

ಹಾಗಾದರೆ ಬನ್ನಿ BV 5 ನ್ಯೂಸ್ ವರದಿಗಾರರು ಸೆರೆಹಿಡಿದ ಅಂತರಾಷ್ಟ್ರೀಯ ಕುಸ್ತಿಗಳ ರೋಚಕ ದೃಶ್ಯಗಳನ್ನುನೀವು ನೋಡಿ.

ವರದಿ : ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!