ರಾಯಚೂರ : ಶತಮಾನ ದಾಟಿದ ಕರ್ನಾಟಕ ಆರ್ಯವೈಶ್ಯ ಮಹಾಸಭೆಗೆ ಮಾಸಿಕ 60 ಲಕ್ಷ ಆದಾಯ
76 ಸಾವಿರಕ್ಕೂ ಮಿಕ್ಕ ಸದಸ್ಯರು ನೊಂದಣಿ
ಸಮಾಜದ ಮುಂದಿನ ಭವಿಷ್ಯಕ್ಕಾಗಿ ಪೂರ್ವ ಆಲೋಚನೆಯೊಂದಿಗೆ 20 ವರ್ಷಗಳ ಯೋಜನೆಯ ಭೂಮಿಕೆ ಸಿದ್ದ.
ಶತಮಾನದ ಇತಿಹಾಸಯುಳ್ಳ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಸಮಾಜದಲ್ಲಿನ ಅಶಕ್ತರಿಗೆ,ವಿದ್ಯಾರ್ಥಿಗಳಿಗೆ, ವಿಕಲಾಂಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡು ಧನ ಸಹಾಯಕ್ಕಾಗಿ ಶ್ರಮಿಸುತ್ತಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ಹೇಳಿದರು.
ರಾಯಚೂರಿನ ಖಾಸಗಿ ಹೋಟೆಲ್ ನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಆರ್ಯವೈಶ್ಯ ಮಹಾಸಭಾ ಘಟಕ ಹಮ್ಮಿಕೊಂಡ ಜಿಲ್ಲಾ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ರು.
ವಾಸವಿ ಅಕಾಡೆಮಿಯಿಂದ ಉಚಿತವಾಗಿ ಐಎಎಸ್,ಐಪಿಎಸ್ ತರಬೇತಿ ನೀಡುತ್ತಿದೆ. ನಾಲ್ಕು ಜಿಲ್ಲೆಗಳಲ್ಲಿ ಅಪರೇಟಿವ್ ಬ್ಯಾಂಕ್ ಗಳನ್ನು ತೆರೆಯಲಾಗಿದೆ ಎಂದರು.
1908 ರಿಂದ ಇಲ್ಲಿಯವರೆಗೆ ನಡೆದು ಬಂದ ಹಾದಿ, ಹಾದಿ,ಎದುರಿಸಿದ ಸವಾಲು ಮತ್ತು ಏಳು-ಬೀಳುಗಳನ್ನು ಬಹು ಮಾರ್ಮಿಕವಾಗಿ ತಿಳಿಸಿದರು.
ವರದಿ : ಗಾರಲದಿನ್ನಿ ವೀರನಗೌಡ




