Ad imageAd image

ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಕಟ್ಟೀಮನಿ ಕಥಿ ಹೇಳೂಣು ಸ್ಪರ್ಧೆ

Bharath Vaibhav
ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಕಟ್ಟೀಮನಿ ಕಥಿ ಹೇಳೂಣು ಸ್ಪರ್ಧೆ
WhatsApp Group Join Now
Telegram Group Join Now

ಕಾಗವಾಡ: ಬಸವರಾಜ ಕಟ್ಟೀಮನಿ ಅವರು ಪ್ರಗತಿಶೀಲ ಸಾಹಿತ್ಯ ಕಂಡಂತಹ ಅಪರೂಪದ ಕಥೆಗಾರರು.ಪ್ರಗತಿಶೀಲ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದವರು ಎಂದು ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಪ್ರೊ.ಬಿ.ಡಿ.ಧಾಮಣ್ಣವರ ಅಭಿಪ್ರಾಯಿಸಿದರು.

ಅವರು ಸ್ಥಳೀಯ ಶಿವಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗ ಐಕ್ಯೂಎಸಿ ಅಡಿಯಲ್ಲಿ ಕರ್ನಾಟಕ ಸರಕಾರದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಹಯೋಗದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಟ್ಟೀಮನಿ ಕಥಿ ಹೇಳೂಣು ಸ್ಫರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಲೇಜು ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಪ್ರೊ.ಜೆ ಕೆ ಪಾಟೀಲ ಅವರು ಕಟ್ಟೀಮನಿ ಅವರ ಜೀವನ ಮತ್ತು ಸಾಹಿತ್ಯ ಕುರಿತು ಮಾತನಾಡುತ್ತ ಕಟ್ಟೀಮನಿ ಅವರು ಸಮಾಜದಲ್ಲಿನ ಅನಿಷ್ಟಗಳನ್ನು ಹೋಗಲಾಡಿಸಲು ಶ್ರಮವಹಿಸಿದ್ದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎ.ಎಂ.ಜಕ್ಕಣ್ಣವರ ಬಸವರಾಜ ಕಟ್ಟೀಮನಿ ಅವರು ಪ್ರಗತಿಶೀಲ ಸಾಹಿತ್ಯದ ಮೇರು ಶಿಖರ ಅವರ ಕಥೆ ಹಾಗು ಕಾದಂಬರಿಯ ಮೂಲಕ ಸಮಾಜವನ್ನು ತಿದ್ದಿ ಸರಿದಾರಿಗೆ ತರವಲ್ಲಿ ಶ್ರಮವಹಿಸಿದ್ದರು.

ಒಟ್ಟು ಒಂಭತ್ತು ಕಥಾ ಸಂಕಲನದಲ್ಲಿ ಸುಮಾರು 65ಕ್ಕೂ ಹೆಚ್ಚು ಕಥೆಗಳಲ್ಲಿ ಅನ್ಯಾಯ,ದಬ್ಬಾಳಿಕೆ, ಅನಾಚಾರ, ಅತ್ಯಾಚಾರದ ಕುರಿತು ಎಗ್ಗಿಲ್ಲದೇ ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಟ್ಟೀಮನಿ ಅವರನ್ನು ಓದಬೇಕು ಎಂದು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಸಹಕಾರ ನೀಡಿಡ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸರ್ವ ಸದಸ್ಯರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.

ಆರಂಭದಲ್ಲಿ ಸಸಿಗೆ ನೀರಹಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕುಮಾರಿ ಅನನ್ಯ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ.ಅಶೋಕ ಪಾಟೀಲ ಸ್ವಾಗತಿಸಿದರು. ಸ್ಪರ್ಧೆಯಲ್ಲಿ ಅನನ್ಯ ಕುಲಕರ್ಣಿ ಪ್ರಥಮ ಸ್ಥಾನ, ಖುಷಿ ಐತವಾಡೆ ಮತ್ತು ಸಮೀಕ್ಷಾ ಸಲಗರೆ ದ್ವಿತೀಯ ಸ್ಥಾನ, ಆರತಿ ಪೂಜಾರಿ ತೃತೀಯ ಸ್ಥಾನ ಪಡೆದುಕೊಂಡರು.

ನಿರ್ಣಾಯಕರಾಗಿ ಡಾ.ಅಮೋಲ್ ಪಾಟೀಲ ಹಾಗೂ ಪ್ರೊ ಮಿಸ್ ಎಸ್.ಎಸ್ ಪಡತಾರೆ ಕಾರ್ಯನಿರ್ವಹಿಸಿದರು.ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ಬಿ ಆಯ್ ಜಗದಮನಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಚಂದ್ರಕಾಂತ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!