Ad imageAd image

ಈರುಳ್ಳಿಗೆ ಬೆಂಬಲ ಬೆಲೆ ನೀಡಲು ಒತ್ತಾಯ

Bharath Vaibhav
ಈರುಳ್ಳಿಗೆ ಬೆಂಬಲ ಬೆಲೆ ನೀಡಲು ಒತ್ತಾಯ
WhatsApp Group Join Now
Telegram Group Join Now

ಸಿರುಗುಪ್ಪ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಇವರಿಗೆ ತಹಸೀಲ್ದಾರರ ಸಿರುಗುಪ್ಪ ಇವರ ಮುಖಾಂತರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಿಸುವ ಬಗ್ಗೆ ಒತ್ತಾಯಿಸಿ ಮನವಿ.ರಾಜ್ಯದಲ್ಲಿ ಈರುಳ್ಳಿ ಬೆಳೆಯನ್ನು ರೈತರ ಬೆಳೆದಿದ್ದಾರೆ ಪ್ರತಿ ವರ್ಷ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಗೆ 2500 ರಿಂದ 3000 ಬೆಲೆಯಲ್ಲಿ ಮಾರಾಟವಾಗುತ್ತಿತ್ತು.

ಆದರೆ ಪ್ರಸ್ತುತ ಕೇಂದ್ರ ಸರ್ಕಾರದಿಂದ ರಫ್ತು ಮಾಡದೆ ಇರುವುದರಿಂದ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಕರ್ನಾಟಕ ರಾಜ್ಯಕ್ಕೆ ಅಮದು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಸರಿಸುಮಾರು 30000 ಎಕರೆಯಲ್ಲಿ ಈರುಳ್ಳಿ ಬೆಳೆದ ರೈತರ ಬೆಲೆ ಕುಸಿತವನ್ನು ಅನುಭವಿಸುತ್ತಿದ್ದು ತೀವ್ರ ಸಂಕಷ್ಟಕ್ಕೆ ಒಳಗಾಗಿರುತ್ತಾರೆ.

ಪ್ರಸಕ್ತ ಮುಂಗಾರು ಸಾಲಿನಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್ ಗೆ 500 ರಿಂದ 600 ಆಗಿರುವುದರಿಂದ ರೈತರು ಪ್ರತಿ ಎಕರೆಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಹಾಕಿದ ಬಂಡವಾಳವು ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ ಆದರೆ ಬೆಲೆ ಪಾತಾಳಕ್ಕೆ ಕುಸಿದಿದೆ, ಇದರಿಂದಾಗಿ ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನೀರು ಬರುವಂತ ಪರಿಸ್ಥಿತಿ ಬಂದೊದಗಿದೆ ಹೋಗ್ತಾ ಬೆಲೆ ಇಲ್ಲದೆ ಕರೆದಿದ್ದಾರೆ ಕಡಿಮೆ ಬೆಲೆಯನ್ನು ನಿರ್ಧಾರ ಮಾಡಿರುವುದರಿಂದ ರೈತರು ಆತಂಕದಲ್ಲಿದ್ದಾರೆ ಈರುಳ್ಳಿಯನ್ನು ಶೇಖರಿ ಇಟ್ಟುಕೊಳ್ಳಲಾಗದೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಆಗದೆ ಗೊಂದಲದಲ್ಲಿದ್ದಾರೆ ಈರುಳ್ಳಿ ಬೆಳೆಯು ದಿನೇ ದಿನೇ ಕೊಳೆಯುವ ಹಂತಕ್ಕೆ ಬಂದಿದೆ.

ಕರ್ನಾಟಕ ಸರ್ಕಾರ ಒತ್ತಕ್ಷಣೆಯ ಮಧ್ಯಪ್ರವೇಶ ಮಾಡಿ ಈರುಳ್ಳಿ ಬೆಳೆಯನ್ನು ಬೆಳೆದ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಪ್ರತಿ ಕ್ವಿಂಟಲ್ ಗೆ ರೂ.3,000 ಗಳ ಬೆಂಬಲ
ಬೆಲೆಯಡಿಯಲ್ಲಿ ಸರ್ಕಾರ ಖರೀದಿಸಲು ಸಂಬಂಧಪಟ್ಟ ಇಲಾಖೆ ಸಚಿವರಿಗೆ, ಜಿಲ್ಲಾಡಳಿತಗಳಿಗೆ ಸೂಕ್ತ ಮಾರುಕಟ್ಟೆ ಬರುವನ್ನು ನಿಗದಿಪಡಿಸಿ ಈರುಳ್ಳಿ ಕರದಿಗೆ ಮುಂದಾಗಬೇಕೆಂದು ಆಗ್ರಹಿಸುತ್ತಿದ್ದೇವೆ.

ಇದೆ ವೇಳೆ ಆರ್ ಮಾದವ ರೆಡ್ಡಿ ರಾಜ್ಯಾಧ್ಯಕ್ಷರು, ದೊಡ್ಡ ಮುದುಕಣ್ಣ ಬಸವರಾಜ, ಆಂಜನೇಯ, ಜಿ ರವೀಂದ್ರ ಪಾಟೇಲ್, ದೊಡ್ಡ ಬಸನಗೌಡ ಹನುಮಂತರ ರೆಡ್ಡಿ,ಮುದ್ದಯ್ಯ, ಕಾಳಪ್ಪ, ವೆಂಕಟೇಶ, ಸಿದ್ದಪ್ಪ, ಮಾರಪ್ಪ,ನಾಗಪ್ಪ, ಬುಳಪ್ಪ,ಟಿ ಮುನಿಸ್ವಾಮಿ, ಇನ್ನೂ ರೈತ ಮುಖಂಡರು ಭಾಗವಹಿಸಿದರು.

ವರದಿ: ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!