Ad imageAd image

ಸರಳವಾಗಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ!

Bharath Vaibhav
ಸರಳವಾಗಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ!
WhatsApp Group Join Now
Telegram Group Join Now

ಸಿಂಧನೂರು : 07 ನಗರದ ತಾಲೂಕ ಆಡಳಿತ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿ ಅರುಣ್ ಎಚ್. ದೇಸಾಯಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ,ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ. ಬಿಜೆಪಿ ಮುಖಂಡ ಕೆ ಕರಿಯಪ್ಪ.ರಾಜುಗೌಡ ಬಾದರ್ಲಿ.ದೊಡ್ದ ಬಸವರಾಜ. ಆರ್. ತಿಮ್ಮಯ್ಯ ನಾಯಕ. ಮಹರ್ಷಿ ವಾಲ್ಮೀಕಿ ಫೋಟೋಗೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಿದರು.

ನಂತರ ವಾಲ್ಮೀಕಿ ವೃತ್ತಕ್ಕೆ ತೆರಳಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಈ ವೇಳೆ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಮಾತನಾಡಿ ತಾಲೂಕು ಆಡಳಿತ ವತಿಯಿಂದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗಿದೆ ಆದರೆ ಸಮಾಜದ ಯುವ ಜನರ ಆಸೆಯಂತೆ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಆಗಬೇಕಾಗಿದೆ, ಮೂರ್ತಿಗೆ ಪ್ರತಿಷ್ಠಾಪನೆಗೆ ನನ್ನ ಸಹಕಾರ ಬೆಂಬಲ ಯಾವಾಗಲೂ ಇರುತ್ತದೆ ಎಂದು ಹೇಳಿದರು.

ನಂತರ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ,ಪವಿತ್ರ ರಾಮಯಣ ಗ್ರಂಥದ ಮಾನವಿತೆಯ ಮೌಲ್ಯಗಳನ್ನು ನಮ್ಮ ಸಮಾಜ ಅಳವಡಿಸಿಕೊಳ್ಳಬೇಕುರಾಮಯಣ ಗ್ರಂಥದಲ್ಲಿ ಅರ್ಥಪೂರ್ಣವಾಗಿ ರಚಿತವಾದ ಗ್ರಂಥವಾಗಿದೆ.

ಜೊತೆಗೆ ವಾಲ್ಮೀಕಿ ಸಮುದಾಯದವರು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು
ಈ ವೇಳೆ ಇ ಓ ಚಂದ್ರಶೇಖರ್, ಪೌರಾಯುಕ್ತ ಪಾಂಡುರಂಗ ಇಟಗಿ, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಭೀಮಣ್ಣ, ಸಿಡಿಪಿಓ ಲಿಂಗನ ಗೌಡ ಚಂದ್ರಶೇಖರ್ ಹಿರೇಮಠ, ನಾಯಕ, ಓಬಳೇಶ್ ನಾಯಕ. ವೆಂಕಟೇಶ ನಾಯಕ ಬೂತಲದಿನ್ನಿ, ತಿಮ್ಮಣ್ಣ ನಾಯಕ ಮಲ್ಲಾಪುರ, ವಿಶ್ವನಾಥ ನಾಯಕ, ವೆಂಕಟೇಶ ನಾಯಕ ರಾಗಲಪರ್ವಿ, ಕರೆಗೌಡ ಕುರುಕುಂದಿ, ಯಂಕೋಬ್ ನಾಯಕ ರಾಮತ್ನಳ, ಮಲ್ಲಯ್ಯ ನಾಯಕ, ಪಕೀರಪ್ಪ ನಾಯಕ ,ಗಂಗಯ್ಯ ಯದ್ದಲದೊಡ್ಡಿ, ಕುಪೇಂದ್ರ ನಾಯಕ , ನಾಗರಾಜ ನಾಯಕ ಗುಂಜಳ್ಳಿ. ಮರಿಯಪ್ಪ ಬಿ ಎಸ್ ಪಿ ಸೇರಿದಂತೆ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.

 

 ವರದಿ : ಬಸವರಾಜ ಬುಕ್ಕನಹಟ್ಟಿ. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!