ಸಿಂಧನೂರು : ಅ 07, ಕರ್ನಾಟಕ ರಕ್ಷಣಾ ವೇದಿಕೆ, ಟಿ ಎ. ನಾರಾಯಣಗೌಡರ ಆದೇಶದ ಮೇರೆಗೆ ರಾಯಚೂರು ಜಿಲ್ಲಾ ಅಧ್ಯಕ್ಷ ಗಂಗಣ್ಣ ಡಿಶ್ ರವರ ಅಧ್ಯಕ್ಷತೆಯಲ್ಲಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕ ಅಧ್ಯಕ್ಷ ಸಭೆಯಲ್ಲಿ ಸಿಂಧನೂರು ಕರವೇ ನೂತನ ತಾಲೂಕ ಅಧ್ಯಕ್ಷರಾಗಿ ಎಲ್. ರಾಜಸಾಬ್ ಗಾಂಧಿನಗರ.
ಅರಕೇರ ತಾಲೂಕ ಅಧ್ಯಕ್ಷರಾಗಿ ರಂಗಣ್ಣ, ಸಿಂಧನೂರು ಮಹಿಳಾ ಘಟಕ ತಾಲೂಕ ಅಧ್ಯಕ್ಷರಾಗಿ ಶಿವಮ್ಮ ಕಬ್ಬೆರ್, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ ಪತ್ರಿಕೆ ಹೇಳಿಕೆ ನೀಡಿದರು.
ನಂತರ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್ ಮಾತನಾಡಿ ಸತತ ೨೫ ವರ್ಷಗಳಿಂದಲೂ ಕರವೇ ತತ್ವ ಸಿದ್ಧಾಂತ ನೀತಿ ನಿಯಮಗಳನ್ನು ಒಪ್ಪಿ ದುಡಿಯುತ್ತಿರುವ ಎಲ್. ರಾಜಸಾಬ್ ಗಾಂಧಿನಗರ ಇವರ ಸೇವೆಯನ್ನು ಗುರುತಿಸಿ ರಾಜ್ಯಾಧ್ಯಕ್ಷರಾದ ಟಿ ಎ. ನಾರಾಯಣಗೌಡರ ಮಾರ್ಗದರ್ಶನದಂತೆ ಸಿಂಧನೂರು ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ನೀಡಲಾಗಿದೆ.
ಕನ್ನಡ -ನೆಲ- ಜಲ ಮತ್ತು ಭಾಷೆಗಾಗಿ ಸಂಘಟನಾತ್ಮಕವಾಗಿ ನೀಡಿರುವ ಈ ಗುರುತರ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ತಾಲೂಕು ಮಟ್ಟದಲ್ಲಿ ಕರವೇ ಸಂಘಟನೆಯನ್ನು ಬಲಪಡಿಸಲು ನೀವು ಶ್ರಮಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ- ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಗೌಡ ಗುಂಜಳ್ಳಿ. ಗುರುರಾಜ ಮುಕ್ಕುಂದಾ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷರು. ಸೋಮನಾಥ ಸುಲಂಗಿ. ಕಾಳಪ್ಪ. ದುರುಗೇಶ್ ಬಾಲಿ. ಭಾಷಾ ಸಾಬ್. ಯಮನಮ್ಮ ಸೇರಿದಂತೆ ಇನ್ನು ಅನೇಕರು ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.




