ಸೇಡಂ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಬಿ. ಆರ್, ಗವಾಯಿ ಅವರ ಮೇಲೆ ಶೂ ಎಸೆದ ಘಟನೆ ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಘಟನೆಯ ಆರೋಪಿಯಾದ ಕಿಶೋರ್ ರಾಕೇಶ್ ವಕೀಲರನ್ನು ಕಠಿಣ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು. ಜೊತೆಗೆ ಇವರ ವಕೀಲ ವೃತ್ತಿಯನ್ನು ರದ್ದುಪಡಿಸಬೇಕು ಎಂದು ಬಹುಜನ ಸಮಾಜ ಪಕ್ಷ ಸೇಡಂ ವತಿಯಿಂದ ಮಾನ್ಯ ಸಹಾಯಕ ಆಯುಕ್ತರು ಸೇಡಂ ರವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್ಪಿ ತಾಲೂಕು ಅಧ್ಯಕ್ಷ ರೇವಣ ಸಿದ್ದ ಎಸ್ ಶಿಂದೆ ದೇಶದ ಬೌದ್ಧ (ಎಸ್,ಸಿ) ಮೂಲದ ವ್ಯಕ್ತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದು ಈ ಮೇಲ್ಜಾತಿಯ ಮನುವಾದಿಗಳಿಗೆ ಸಹಿಸಿಕೊಳ್ಳಕೆ ಆಗುತ್ತಿಲ್ಲ. ಈ ಮನುವಾದಿಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಹಲ್ಲೆ ಮಾಡಲು ಹಿಂಜರಿಯುತ್ತಿಲ್ಲ ಎಂದರೆ ಈ ದೇಶದ ಇನ್ನುಳಿದ ಅಸಹಾಯಕ,ಶೋಷಿತ ಸಮುದಾಯಗಳ ಸ್ಥಿತಿ ಹೇಗೆ ಎಂಬುವುದರ ಬಗ್ಗೆ ಯೋಚಿಸಬೇಕಾಗಿದೆ ಇಂಥ ಅಹಿತಕರ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಇಂತಹ ಘಟನೆಯನ್ನು ಬಹುಜನ ಸಮಾಜ ಪಕ್ಷ ಸಹಿಸುವುದಿಲ್ಲ ಎಂದು ಶಿಂದೆ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್,ರಾಮು ಇಂಜೆಳ್ಳಿಕರ್, ಸಿದ್ದು ದೊರೆ, ಕೃಷ್ಣ ಟೈಗಾರ, ಜಗದೀಶ ಇಮಾಡಪೂರ, ಶಿವು ನಾಮವಾರ, ಶ್ಯಾಮ್ ಗುಂಡೇಪಲ್ಲಿ, ಪ್ರದೀಪ ಸಿಂಧೆ, ಸಂದೀಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




