————————————————ಪಥ ಸಂಚಲನ, ಶತಮಾನೋತ್ಸವದ ಸುವರ್ಣ ಕ್ಷಣ
ಭಾಲ್ಕಿ: ತಾಲೂಕಿನ ಮೆಹಕರ ಮಂಡಲವು ಈ ಬಾರಿ ಇತಿಹಾಸವನ್ನು ರಚಿಸಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಪ್ರಯುಕ್ತ ನಡೆದ ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದಲ್ಲಿ ಸ್ವಯಂಸೇವಕರು ತಮ್ಮ ಪೂರ್ಣ ಶಕ್ತಿಯೊಂದಿಗೆ, ಹೃದಯದಲ್ಲಿ ದೇಶಭಕ್ತಿ ತುಂಬಿಕೊಂಡು ಪಾಲ್ಗೊಂಡರು.

ಕೈಯಲ್ಲಿ ಕೇಸರಿಯ ಧ್ವಜ, ಹೃದಯದಲ್ಲಿ ಶ್ರದ್ಧೆ, ತುಟಿಗಳಲ್ಲಿ “ಭಾರತ ಮಾತಾ ಕಿ ಜಯ” ಘೋಷಣೆ – ಈ ಎಲ್ಲದರಿಂದ ಊರಿನ ವಾತಾವರಣವೇ ದೇಶಭಕ್ತಿಯ ರಾಗದಲ್ಲಿ ತೇಲಿತು. ಮಕ್ಕಳಿಂದ ವೃದ್ಧರ ತನಕ, ಮಹಿಳೆಯರಿಂದ ಯುವಕರ ತನಕ, ಎಲ್ಲರೂ ಸ್ವಯಂಸೇವಕರ ಪಥಸಂಚಲನವನ್ನು ಕಂಡು ಕಣ್ಣೀರು ತುಂಬಿದ ಹೆಮ್ಮೆ ಅನುಭವಿಸಿದರು.ಮಾತೆಯರು, ಸಜ್ಜನ ವ್ಯಕ್ತಿಗಳು, ಹಿತೈಷಿ ಬಂಧುಗಳು ತಮ್ಮ ಓಣಿಯಲ್ಲಿ ರೊಂಗೋಲಿ ಹಾಕಿ ಪುಷ್ಪ ಅರ್ಚನೆ ಮಾಡಿ ಭವ್ಯವಾಗಿ ಸ್ವಾಗತಿಸಿಕೊಂಡಿದರು.
ಈ ಪಥಸಂಚಲನವು ಕೇವಲ ಒಂದು ಕಾರ್ಯಕ್ರಮವಲ್ಲ – ಅದು ಸಂಘದ ಶತಮಾನಗಳ ಸೇವಾ ಪರಂಪರೆಯ ಪ್ರತಿಬಿಂಬ. ಸ್ವಯಂಸೇವಕರ ಶಿಸ್ತಿನ ಹೆಜ್ಜೆಗಳು ಸಮಾಜಕ್ಕೆ ಶಿಸ್ತಿನ ಸಂದೇಶ, ಅವರ ಘೋಷಣೆಗಳು ರಾಷ್ಟ್ರಭಕ್ತಿಯ ಘೋಷವಾಕ್ಯ. ವಿಜಯದಶಮಿಯ ವಿಜಯ ತತ್ವ ಹಾಗೂ ಸಂಘದ ಶತಮಾನೋತ್ಸವದ ಪ್ರೇರಣೆ ಒಟ್ಟಾಗಿ ಜನಮನದಲ್ಲಿ ಅಜರಾಮರ ನೆನಪು ಮೂಡಿಸಿದವು.ಮೆಹಕರ ಗ್ರಾಮದಲ್ಲಿ ಎಲ್ಲರಿಗೂ ಒಂದೇ ಭಾವನೆ ಹೊಳೆಯಿತು–ಸಂಘವು ಕೇವಲ ಸಂಘವಲ್ಲ, ಅದು ಸಮಾಜದ ಶಕ್ತಿ, ಸಂಸ್ಕೃತಿಯ ಪ್ರತೀಕ, ರಾಷ್ಟ್ರದ ಆಶಾಕಿರಣ.” ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮವು ಮಂಗಳವಾರ ದೇಶಭಕ್ತಿಯ ಚೈತನ್ಯದಿಂದ ಕಂಗೊಳಿಸಿತು.
ವೇದಿಕೆಯ ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವಹಿಸಿಕೊಂಡು ಪರಮ ಪೂಜ್ಯನೀಯ ರಾಜೇಶ್ವರ ಶಿವಾಚಾರ್ಯರು ಪ್ರೇರಣಾದಾಯಕವಾಗಿ ಆಶೀರ್ವಚನ ನೀಡಿದರು. ಅವರು ಮಾತನಾಡುತ್ತಾ,ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ ನೂರು ವರ್ಷಗಳಿಂದ ಸೇವೆಯ ಮೂಲಕ ರಾಷ್ಟ್ರನಿರ್ಮಾಣದ ಹಾದಿಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಪ್ರವಾಹ, ಭೂಕಂಪದಂತಹ ವಿಪತ್ತುಗಳಲ್ಲಿ ಜನರ ಜೀವ ಉಳಿಸಿರುವ ಸಂಘ, ಗಡಿ ಭಾಗದಲ್ಲಿ ಯೋಧರ ಜೊತೆಗೂಡಿ ಸೇವೆ ಸಲ್ಲಿಸಿರುವ ಸಂಘ – ಇವುಗಳೆಲ್ಲ ದೇಶದ ಏಕೈಕ ಶಕ್ತಿ.
ಸಂಘವು ದೇಶದ ಯುವಕರಲ್ಲಿ ಶಿಸ್ತು, ದೇಶಭಕ್ತಿ, ಮಾನವೀಯತೆ ತುಂಬುವ ದಿಕ್ಸೂಚಿಯಂತಿದೆ. ಸಂಘದ ಕಾರ್ಯದಿಂದ ಅನೇಕ ಮಹಾನ್ ನಾಯಕರನ್ನು ದೇಶಕ್ಕೆ ನೀಡಿದೆ. ಡಾ. ಕೇಶವ ಬಲಿರಾಮ ಹೆಡಗೇವಾರ, ಮಾ.ಗೋಳವಾಲ್ಕರ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅಂತಹ ಮುಂತಾದ ಮಹಾನ್ ವ್ಯಕ್ತಿಗಳು ಸಂಘದ ಪಾಠಶಾಲೆಯಿಂದ ಹೊರಬಂದಿದ್ದಾರೆ.
ಹಿಂದೂ ಸಮಾಜ ಬಲಿಷ್ಠವಾದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರಿಗೂ ರಾಷ್ಟ್ರರಕ್ಷಣೆ ಮತ್ತು ಸಮಾಜಸೇವೆ ಮಾಡುವ ಜವಾಬ್ದಾರಿ ಇದೆ” ಎಂದು ಆಶಯಭರಿತವಾಗಿ ತಿಳಿಸಿದರು.
ಸತೀಶ ಬೋರಾಳೆ ವಕೀಲರು ವಕ್ತಾರಾರಾಗಿ ಆಗಮಿಸಿ ಅವರು ಮಾತನಾಡುತ್ತಾ,ರಾಷ್ಟ್ರೀಯ ಸ್ವಯಂಸೇವಕ ಸಂಘವು ಕೋಟ್ಯಾಂತರ ಯುವಕರಿಗೆ ಶಿಸ್ತು, ಸೇವಾ ಮನೋಭಾವನೆ ಮತ್ತು ದೇಶಭಕ್ತಿ ತುಂಬುತ್ತಿದೆ. ನೂರರ ಸಂಭ್ರಮದಲ್ಲಿ ಸಂಘವು ಭಾರತೀಯ ಮೌಲ್ಯಗಳ ಆಧಾರದ ಮೇಲೆ ಬಲಿಷ್ಠ ಭಾರತದ ನಿರ್ಮಾಣದತ್ತ ಸಾಗುತ್ತಿದೆ. ಪ್ರತಿಯೊಬ್ಬ ಯುವಕರೂ ಸಂಘದ ಶಿಸ್ತು ಮತ್ತು ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಸಮಾಜದಲ್ಲಿ ಸುಧಾರಣೆ ಜೊತೆಗೆ ದೇಶದ ಭವಿಷ್ಯ ಇನ್ನಷ್ಟು ಭದ್ರವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸತೀಶ ಮುದ್ದಾಳೆ, ರೆಕುನಾಯಕ, ಮಹೇಶ ಶೀಲವಂತ, ವೆಂಕಟ ಲಾಳೆ, ಶಿವರಾಜ ಗಂದಗೆ, ಸುನಿಲ ಕುಲಕರ್ಣಿ, ಗಣೇಶ ವಲಾಂಡೆ, ನೌನಾಥ ಪಾಟೀಲ, ವಿಜಯಕುಮಾರ ನಿಟ್ಟೂರೇ ಸೇರಿದಂತೆ ನಿವೃತ್ತ ಸೈನಿಕರು, ಗ್ರಾಮದ ಮಾತೆಯರು, ಹಿತೈಷಿ ಬಂಧುಗಳು,ಯುವಕರು ಹಾಗೂ ಅನೇಕ ದೇಶ ಭಕ್ತ ಸ್ವಯಂಸೇವಕರು ಭಾಗವಹಿಸಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ




