ಸೇಡಂ : ಮುಧೋಳ್ ವಲಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಬೆಳೆಹಾನಿ ಪರಿಹಾರ ಪ್ರತಿ ಎಕರೆಗೆ ೨೫೦೦ ಸಾವಿರ ರೂಪಾಯಿ ನೀಡಬೇಕು ಎಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆಯನ್ನು ಮುಧೋಳ ಬಸ್ ನಿಲ್ದಾಣದಿಂದ ಕೊಲಕುಂದ ಕ್ರಾಸ್ ವರೆಗೆ ಪಾದಯಾತ್ರೆ ಮಾಡುವ ಮುಖಾಂತರ ಪ್ರತಿಭಟನೆ ನಡೆಸಿದರು.
ಮುಂದಿನ ಚುನಾವಣೆಯಲ್ಲಿ ರೈತರು ಹಸಿರು ಶಾಲುವನ್ನು ವಿಧಾನಸಭೆಯೊಳಗೆ ಕಳುಹಿಸಿಕೊಡಬೇಕಾದ ಜವಾಬ್ದಾರಿ ವಹಿಸುತ್ತಾರೆ ಎಂದು ಈ ವೇದಿಕೆ ಮೂಲಕ ಎಚ್ಚರಿಕೆಯ ಮನವಿ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಪಾಟೀಲ್ ಅವರು ಪ್ರತಿಭಟನೆಯಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸದಸ್ಯರಾದ ಅಲ್ಲಾಹ ಮಾಲಿ ಪಾಟೀಲ ಅವರು ಮಾತನಾಡಿ ರೈತರ ಸಂಕಷ್ಟಕ್ಕೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಹೋರಾಟಕ್ಕೆ ಸತ್ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ಅವರು ಮಾತನಾಡಿ ಸೈನಿಕ ಮತ್ತು ರೈತ ನಮ್ಮೆರಡು ಕಣ್ಣುಗಳಿದ್ದಂತೆ ಎರಡಲ್ಲಿ ಒಂದು ಕಳೆದರೂ ನೋವಾಗುತ್ತದೆ.
ಸರಕಾರವು ರೈತರ ಮೇಲೆ ಕರುಣೆ ತೋರಿಸಬೇಕು ರೈತರ ಪರವಾಗಿ ನಿಲ್ಲಬೇಕು ಈ ಹೋರಾಟಕ್ಕೆ ನಮ್ಮ ಸಂಘಟನೆ ಸಂಪರ್ಣ ಸಾತ್ ನೀಡುತ್ತದೆ ಎಂದು ಮಾತನಾಡಿದರು.
ಉಪ ತಹಸೀಲ್ದಾರರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ, ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ, ಪ್ರದಾನ ಕಾರ್ಯದರ್ಶಿಗಳಾದ ಮಹಿಪಾಲ್ ರೆಡ್ಡಿ ಯಾನಗುಂದಿ, ಉಪಾಧ್ಯಕ್ಷರಾದ ಇಮ್ರಾನ್ ಶೇಖ್, ಮುಧೋಳ ವಲಯ ಅಧ್ಯಕ್ಷರಾದ ಕಾಶಪ್ಪ ಮೆದಕ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್, ಶ್ರೀನಿವಾಸ್ ರೆಡ್ಡಿ ಮದನ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




