ಸೇಡಂ:ಅತಿ ಶೀಘ್ರದಲ್ಲಿ ಹೆಸರು ಉದ್ದು ತೊಗರಿ ಬೆಳೆ ನಷ್ಟ ಪರಿಹಾರ ಪ್ರತಿ ಎಕರೆಗೆ 25,000 ರೂಪಾಯಿಗಳು ರೈತರ ಖಾತೆಗೆ ಜಮಾ ಮಾಡಬೇಕು ರಾಷ್ಟ್ರಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡ ಮಾಡಬೇಕು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಹ ಸಾಲ ಮನ್ನಾ ಮಾಡುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್ ಅವರ ನೇತೃತ್ವದಲ್ಲಿ ಮಾನ್ಯ ತಹಸೀಲ್ದಾರರು ಸೇಡಂ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ತಾಲೂಕ ದಂಡಾಧಿಕಾರಿಗಳ ಕಾರ್ಯಾಲಯದ ಎದುರುಗಡೆ ಬಾರುಕೋಲು ಹಿಡಿದು ವಿನೂತನ ಪ್ರತಿಭಟನೆ ಮಾಡಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಮಾತನಾಡಿದ ತಾಲೂಕ ಅಧ್ಯಕ್ಷರಾದ ಡಾ ರಾಮಚಂದ್ರ ಗುತ್ತೇದಾರ್ ಈ ಬಾರಿ ಜುಲೈ ಮೊದಲನೇ ವಾರದಲ್ಲಿ ಅತಿ ಹೆಚ್ಚು ಮಳೆ ಪ್ರಾರಂಭವಾಗಿರುವುದರಿಂದ. ರೈತರು ಬಿತ್ತಿದ ಹೆಸರು, ಉದ್ದು ಕೈಗೆ ಎಟಕದೇ ಮಣ್ಣು ಪಾಲಾಗಿದ್ದು, ಅಲ್ಪ ಸ್ವಲ್ಪ ಉಳಿದ ತೊಗರಿ ಸಹ ನಿರಂತರ ಸುರಿದ ಮಳೆಯಿಂದ ರೈತರ ಹೊಲಗಳಲ್ಲಿ ನೀರು ನಿಂತು ಸಂಪೂರ್ಣ ತೊಗರಿ ಬೆಳೆ ಹಾಳಾಗಿದೆ.

ಅವಮಾನ ವರದಿಯ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ. ಅದು ಕಲ್ಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು. ತಾವುಗಳು ಸಹ ಕಲ್ಬುರ್ಗಿ ಜಿಲ್ಲೆಗೆ ಬಂದು ಸಮೀಕ್ಷೆ ಮಾಡಿದ್ದೀರಿ ಆದರೆ ಇಲ್ಲಿಯವರೆಗೆ.ರೈತರ ಖಾತೆಗೆ ಹಣ ಜಮಾ ಆಗಿರುವುದಿಲ್ಲ. ಮೇಲಿಂದ ಮೇಲೆ ಸಮೀಕ್ಷೆಗಳು ಮಾತ್ರ ಮಾಡಿದ್ದೀರಿ ಯಾವುದೇ ಕ್ರಮ ಕೈಗೊಂಡಿಲ್ಲ, ಆದ್ದರಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆ ಬಿಟ್ಟು. ಬೇರೆ ಕೆಲಸ ಮಾಡಲು ಸಾಧ್ಯವೇ ಇಲ್ಲ.ರೈತರು ಭೂಮಿ ತಾಯಿಯನ್ನು ನಂಬಿ ಜೀವನ ಮಾಡುತ್ತಾರೆ. ವ್ಯವಹಾರ ಮಾಡುವವರು ಅನೇಕ ವ್ಯವಹಾರ ಮಾಡಬಹುದು. ರೈತನ ವ್ಯವಹಾರ ಕೃಷಿ ಮಾತ್ರ. ಇದು ಅಲ್ಲದೆ. ಕೆಲವು ರೈತರು ಭೂಮಿತಾಯಿಯನ್ನು ನಂಬಿಕೊಂಡು. ಈ ಬಾರಿ ಬಡ ರೈತರು ದೊಡ್ಡ ರೈತರ ಹತ್ತಿರ ಹೊಲಗಳನ್ನು ಪ್ರತಿ ಎಕರೆಗೆ 30,000 ರೂಪಾಯಿಗಳಿಗೆ ಗಿರಿವಿ ಹಾಕಿಕೊಂಡಿರುತ್ತಾರೆ. ಈ ರೈತರ ಪಾಡೇನು. ರೈತರು, ಗೋಣೆ ಚೀಲಗಳಲ್ಲಿ ಬಿತ್ತಲು ಬೀಜಗಳು.ಹೊಲಗಳಿಗೆ ತೆಗೆದುಕೊಂಡು ಹೋಗಿ. ಬಿತ್ತಿದ ಬೀಜಗಳು ಸಹ ಮರಳಿ ಗೋಣಿಚೀಲದಲ್ಲಿ ತರದಂತ ಪರಿಸ್ಥಿತಿಯಾಗಿದೆ. ಆದ್ದರಿಂದ ದಯಾಳುಗಳಾದ ತಾವುಗಳು. ಹಿಂದೆ ಮುಂದೆ ನೋಡದೆ ಅತಿ ಶೀಘ್ರದಲ್ಲಿ ರೈತರ ಖಾತೆಗೆ ಹಣ ಜಮಾ ಮಾಡಬೇಕು ಹಾಗೂ ಕೃಷಿ ಚಟುವಟಿಕೆಗಳಿಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿದ ರೈತರ ಸಾಲವನ್ನು ಮನ್ನಾ ಮಾಡಿ ರೈತರ ಸಂಕಷ್ಟವನ್ನು ನೀಗಿಸಬೇಕೆಂದು ರೈತರ ಪರವಾಗಿ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಡಾಕ್ಟರ್ ರಾಮಚಂದ್ರ ಗುತ್ತೇದಾರ್ ಕ.ರ.ವೇ. ತಾಲೂಕ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ವಿನೋತನವಾಗಿ ತಲೆಯ ಮೇಲೆ ಗೋಣಿಚೀಲಗಳನ್ನು ಹಾಕಿಕೊಂಡು ಹಾಗೂ ಕೈಯಲ್ಲಿ ಬರಕೊಲು ಇಡುಕೊಂಡು ವಿನೋತನ ಹೋರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಪೂಜಾರಿ, ಶ್ರೀನಿವಾಸ್ ರೆಡ್ಡಿ ಮದನಾ, ಗುಂಡಪ್ಪ ಪೂಜಾರಿ, ರವಿ ಸಿಂಗ್, ಮಲ್ಲಿಕಾರ್ಜುನ್, ಚಂದ್ರಶೇಖರ್ ಮಡಿವಾಳ, ಕಿರಣ್ ಕುಮಾರ್ ಪಾಟೀಲ್, ಪವನ್ ಕುಲಕರ್ಣಿ, ಅಂಜಿಲಪ್ಪ ಬೋಯಿನ್, ಸಾಯಪ್ಪ ಬಾಪುಗೌಡ ಚಿಂಚೋಳಿ, ಕುಂಬಾರ್ ಮಹಾದೇವ ಗುತ್ತೇದಾರ್, ಭೀಮರಾಯ ಗಡ್ಡಿ ಮನೆ, ಭಗವಂತ ಗೋಡೆಕಾರ್, ಬಸವರಾಜ, ಶಿವರಾಯ ಮಡಿವಾಳ, ಸದಾನಂದ ನಾಟೇಕರ್, ಮಲ್ಲಿಕಾರ್ಜುನ್ ನಾಟೇಕರ, ಶಾಮಪ್ಪ, ಭಗವಾನ್ ದೊಡ್ಮನಿ, ಸಿದ್ದು ಮೈಲಾರಿ ಶರಣಪ್ಪ ಚಿಟ್ಕಂಪಲ್ಲಿ, ಹನುಮಂತ ಚಿಟುಕನಪಳ್ಳಿ, ಭೀಮರಾಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




