ವಿಜಯಪುರ : ಸರ್ಕಾರದ ಆದೇಶದಂತೆ ಮನೆ ಮನೆಗೆ ಪೊಲೀಸ್ ಸಂದರ್ಶನ ಮತ್ತು ಮಾಹಿತಿ ಎಂಬ ವಿನೂತನ ಕಾರ್ಯಕ್ರಮ.
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪೊಲೀಸರ ಮನೆ ಮನೆಗೆ ಪೊಲೀಸ್ ಸಂದರ್ಶನ ಮತ್ತು ಮಾಹಿತಿ ಎಂಬ ವಿನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಸವನ ಬಾಗೇವಾಡಿಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೆ ಸಂಬಂಧಪಟ್ಟ ಬಿಟ್ ಪೊಲೀಸರು ಮನೆ ಮನೆಗಳಿಗೆ ಭೇಟಿ.
ಸಮಸ್ಯೆಗಳ ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಿಂದಲೆ ಫೋನ್ ಕರೆ ಮಾಡಿ ಸಮಸ್ಯೆಗಳನ್ನು ವಿವರಿಸಿ ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುವಂತೆ ತಿಳಿಸುತ್ತಿದ್ದ್ದಾರೆ.
ಪೊಲೀಸರ ಈ ಕಾರ್ಯಕ್ರಮಕ್ಕೆ ಪ್ರತಿ ಗ್ರಾಮಗಳ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವರದಿ : ಕೃಷ್ಣ ಎಚ್ ರಾಥೋಡ್




