ಮೊಳಕಾಲ್ಮೂರು: ಪಟ್ಟಣದ ತಾಲೂಕು ಕಚೇರಿ ಎದುರು ಸರ್ಕಾರದ ವಿರುದ್ಧ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಹಿತಾ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಟಿ. ಜಗದೀಶ್ ರವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ನೂರಾರು ಜನ ವಾಲ್ಮೀಕಿ ಸಮುದಾಯದವರು ಬ್ಯಾನರ್ ಹಾಗೂ ಬಾವುಟ ಗಳನ್ನು ಹಿಡಿದು ಪಟ್ಟಣದ ಬಸ್ ನಿಲ್ದಾಣದಿಂದ ಹೊರಟು ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿ, ವಾಲ್ಮೀಕಿ ಸಮಾಜ ಕಾಡು ಮೇಡುಳಲ್ಲಿ ವಾಸಿಸುತ್ತಾ ತನ್ನ ಬುಡಕಟ್ಟು ಸಂಸ್ಕೃತಿಯನ್ನು ಪಾಲಿಸಿಕೊಂಡು ಜೀವಿಸುತ್ತಾ ಬಂದಿದೆ, ವಾಲ್ಮೀಕಿ ಸಮುದಾಯವು ಪೌರಾಣಿಕ ಕಾಲದಿಂದಲೂ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ವಾಗಿದೆ ಈಗೀದ್ದಾಗಲೂ ಇದರ ಜೊತೆಗೆ ಕುರುಬ ಮತ್ತು ಅನ್ಯ ಜಾತಿಗಳನ್ನು ಸೇರಿಸುವ ಸರ್ಕಾರದ ನಿಲುವು ಸರಿಯಲ್ಲ . ಇದರ ವಿರುದ್ಧ ನಾಯಕ ಸಮಾಜ ರಾಜ್ಯದ್ಯಂತ ಬೃಹತ್ ಪ್ರತಿಭಟನೆ ನಡೆಸುವುದು ಎಂದು ಸರ್ಕಾರದ ವಿರುದ್ಧ ಗುಡುಗಿದರು.
ನಮ್ಮ ವಾಲ್ಮೀಕಿ ಸಮುದಾಯದ ಜತೆ ಬೇರೆ ಜಾತಿಯನ್ನು ಸೇರಿಸುವುದ್ದಾರೆ ಮೊದಲು ನಮಗೆ ಒಳ ಮೀಸಲಾತಿ ನೀಡಿ. ಹಾಗೆ, ಈಗಿರುವ 7 ಪರ್ಸೆಂಟ್ ಮೀಸಲಾತಿ ಜತೆ ಇನ್ನು 7 ಪರ್ಸೆಂಟ್ ಮೀಸಲಾತಿ ನೀಡಿ ಒಟ್ಟು ನಮಗೆ 14 ಪರ್ಸೆಂಟ್ ಮೀಸಲಾತಿ ಕೊಡಿ . ನಮ್ಮ ಸಮಾಜದ ಜನರ ಬಗ್ಗೆ ಕಾಳಜಿ ಇದ್ದರೆ ಹೆಚ್ಚಿನ ಅನುದಾನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ನೀಡಿ , ನಾಯಕ ಸಮಾಜ ಅನ್ಯ ಜಾತಿಗಳ ಜತೆ ಅನೂನ್ಯವಾಗಿದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಇದನ್ನು ಅರಿತು ಕೊಂಡು ನಮ್ಮ ಜಾತಿಗೆ ಅನ್ಯಾಯ ವಾಗುವಂತ ಕೆಲಸ ಮಾಡಬಾರದು, ನಮ್ಮ ಪರಿಶಿಷ್ಟ ಪಂಗಡದ ಶಾಸಕರು ಗಳು ನಮ್ಮ ಪರಿಶಿಷ್ಟ ಪಂಗಡದ ಜತೆ ಕುರುಬ ಮತ್ತು ಅನ್ಯ ಜಾತಿಗಳನ್ನು ಸೇರಿಸುವ ಸರ್ಕಾರದ ನಿಲುವಿನ ವಿರುದ್ಧ ಸದನದಲ್ಲಿ ದ್ವನಿ ಎತ್ತಬೇಕೆಂದು ತಿಳಿಸಿದರು . ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡರು ತಮ್ಮ ನಾಯಕ ಜನಾಂಗಕ್ಕೆ ಮೀಸಲಾತಿ ವಿಚಾರವಾಗಿ ಸಹಕರಿಸಿದರೆಂದು ನುಡಿದರು.
ವರದಿ: ಪಿಎಂ ಗಂಗಾಧರ




