ಭಾರತ ವೈಭವ್ ಸುದ್ದಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಕಾಮಗಾರಿಯ ಬಿಲ್ ಪೂರೈಸಲು ಗುತ್ತಿಗೆದಾರರಿಂದ ಮೂರು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಇಇ ಮಹೇಶ್ ರಾಠೋಡ ಎಂಬುವರನ್ನು ಗದಗ ಜಿಲ್ಲಾ ಲೋಕಾಯುಕ್ತ ಪೊಲೀಸ್ ಆಯುಕ್ತರು ಬಂಧಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಯ ದ್ವಿತೀಯ ದರ್ಜೆ ಗುತ್ತಿಗೆದಾರ ಶರಣಬಸಪ್ಪ ಸಾಬಣ್ಣ ಅವರು ರೋಣ ತಾಲೂಕಿನಲ್ಲಿ ರೂ 34 ಲಕ್ಷ ಮೌಲ್ಯದ ಕಾಮಗಾರಿಯನ್ನು ಆನ್ಲೈನ್ ಮೂಲಕ ಗೊತ್ತಿಗೆ ಪಡೆದು ಆರು ತಿಂಗಳ ಹಿಂದೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ ಕಾಮಗಾರಿ ಬಿಲ್ ಪಾವತಿಗೆ ಲೋಕೋಪಯೋಗಿ ಇಲಾಖೆಯ ಎಇಇ ಮಹೇಶ್ ರಾಠೋಡ 4.60 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿನ ಆಧಾರ ಮೇಲೆ ಕಾರ್ಯಾಚರಣೆ ನಡೆಸಿ ಮೂರು ಲಕ್ಷ ಮುಂಗಡವಾಗಿ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
ಈ ಕಾರ್ಯಾಚರಣೆಯಲ್ಲಿ ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಸ್ ಟಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಗದಗ ಜಿಲ್ಲಾ ಉಪಾಧ್ಯೀಕ್ಷಕರಾದ ವಿಜಯ್ ಬಿರಾದರ ಅವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ವರದಿ: ನಿತೀಶಗೌಡ ತಡಸ ಪಾಟೀಲ್




