Ad imageAd image

 ಅಭಿವೃದ್ದಿ ಅಧಿಕಾರಿ ಬಿ. ಎಸ್. ದಳವಾಯಿ ಬೀಳ್ಕೊಡುಗೆ

Bharath Vaibhav
 ಅಭಿವೃದ್ದಿ ಅಧಿಕಾರಿ ಬಿ. ಎಸ್. ದಳವಾಯಿ ಬೀಳ್ಕೊಡುಗೆ
WhatsApp Group Join Now
Telegram Group Join Now

ರೋಣ :ಹಿರೇಹಾಳ ಗ್ರಾಮ ಪಂಚಾಯತಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಬಿ ಎಸ್ ದಳವಾಯಿ ಅವರು ಹೃದಯ ಸ್ವರ್ಶಿ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಚಂದ್ರಶೇಖರ ಕಂದಕೂರ ಮಾತನಾಡಿ ಬಿ.ಎಸ್ ದಳವಾಯಿ ಯವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಅಷ್ಟೇ ಅಲ್ಲ ಇವರು ಸೇವೆಯ ಪೂರ್ವದಲ್ಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆಯಾಗಿ 13 ವರ್ಷಗಳ ಕಾಲ ಸೇವೆ ಮಾಡಿ ಅಲ್ಲಿಯ ಶಿಸ್ತುಬದ್ಧ ಸಮಯ ಪಾಲನೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಹಿರೇಹಾಳ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶ್ರೀಮತಿ ರೇಖಾ ಶರಣಪ್ಪ ಪ್ಯಾಟಿ ಮಾತನಾಡಿ
ಬೀ ಎಸ್ ದಳವಾಯಿ ಅವರು ತಾಳ್ಮೆಯ ಪ್ರತಿರೂಪ ಎಂದರೆ ತಪ್ಪಾಗಲಾರದು ಏಕೆಂದರೆ ಸಾರ್ವಜನಿಕರು ಯಾರೇ ಬರಲಿ ಅವರಿಗೆ ಸಹಾನುಭೂತಿಯಿಂದ ಅವರ ಸಮಸ್ಯೆ ಅಳಿಸಿ ತಕ್ಷಣದಲ್ಲಿ ಪರಿಹಾರ ಒದಗಿ ಕೊಟ್ಟಂತ ಉದಾರಣೆಗಳು ಸಾಕಷ್ಟು ಇವೆ ಆದ್ದರಿಂದ ಇವತ್ತಿನ ದಿವಸ ಅವರು ಸಾರ್ವಜನಿಕ ಹೃದಯದಲ್ಲಿ ಅಚ್ಚ ಅಳಿಯದೆ ಅವರ ಕಾರ್ಯ ವೈಖರಿ ಉಳಿದ್ದಿದೆ ಎಂದು ಮಾತನಾಡಿದರು.

ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ನೀಲಪ್ಪ ತಲಭಟ್ಟಿ,ಶರಣಪ್ಪ ಪ್ಯಾಟಿ,ಪರ್ವತಗೌಡ ಮುನೇಗೌಡ ,ಶ್ರೀಮತಿ ಶೋಭಾ ಉಮಾಚಗಿ, ಮಲ್ಲವ್ವ ಗಣಾಚಾರಿ,ನಿರ್ಮಲ ಭಿಮಪ್ಪನವರ್ ,ಕರಿಯಪ್ಪ ಮಾದರ,ಲಂಕೇಶ್ ಓಲೇಕಾ‌ರ್.ಭೀಮಪ್ಪ ಮಾದರ ,ರಮೇಶ ಬೇವಿನಗಿಡದ,ಸುಭಾಷ ತೋಟದ .ಫಕ್ರುಸಾಬ್ ಮುಲ್ಲಾ,ಯಲ್ಲಪ್ಪ ರಾಜೂರ,ಯಲ್ಲಪ್ಪ ಮಾದನ್ನವರ,ಮಲ್ಲಗೌಡ ವಿ ಗೌಡರ,ರಮೇಶ ವಕ್ರದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಗ್ರಾಮ ಅರಣ್ಯ ಪಂಚಾಯತ ಹಿರೇಹಾಳ ಮತ್ತು ಬಳಗೋಡ ಹೊನ್ನಿಗನೂರ ಯರೇಕುರುಮನಾಳ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!