ಬೆಂಗಳೂರು : ‘ಬಿಗ್ ಬಾಸ್’ ರಿಯಾಲಿಟಿ ಶೋ ಯಾವತ್ತಿಗೂ ನಿಲ್ಲೋದಿಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ವೇದಿಕೆಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್ ಬಿಗ್ ಬಾಸ್’ ರಿಯಾಲಿಟಿ ಶೋ ಯಾವತ್ತಿಗೂ ನಿಲ್ಲೋಲ್ಲ, ನಿಮ್ಮ ಪ್ರೀತಿ, ಸಹಕಾರ ಇರುವವರೆಗೂ ಶೋ ನಿಲ್ಲಲ್ಲ.ಬಿಗ್ ಬಾಸ್ ಶೋ ಮುಂದುವರೆಸಿಲು ಸಹಕರಿಸಿದವರಿಗೆ ಧನ್ಯವಾದಗಳು ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ನಿಯಮ ಉಲ್ಲಂಘನೆ ಹಿನ್ನೆಲೆ ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ನಂತರ ಬೆಂಗಳೂರು ಡಿಸಿ 10 ದಿನ ಕಾಲಾವಕಾಶ ನಿಡಿದ ಹಿನ್ನೆಲೆ ಗೇಟ್ ಬೀಗ ತೆಗೆಯಲಾಗಿತ್ತು. ನಂತರ ‘ಬಿಗ್ ಬಾಸ್’ ಮನೆಗೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು.




