————————————–ಬೆಳಗಾವಿ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕಿನ ಚುನಾವಣೆ
ಬೆಳಗಾವಿ: ದಿನಾಂಕ 11 ರಂದು ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಗೆ ಬೆಳಗಾವಿ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಅವರ ಮೊದಲ ಹೆಜ್ಜೆಯನ್ನು ಇಟ್ಟಿದಾರೆ.

ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಹಿರಿಯ ನಾಯಕರು ಬಾಲಚಂದ್ರ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ, ಚನ್ನರಾಜ ಹಟ್ಟಿಹೊಳಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಸಹಕಾರದ ಸಿದ್ಧಾಂತಗಳನ್ನು ಬೆಂಬಲಿಸಿ ಜನರ ಸೇವೆಗೆ ಸಮರ್ಪಿತರಾಗಿರುವ ಅವರ ಪ್ರಯತ್ನಕ್ಕೆ ಎಲ್ಲರ ಆಶೀರ್ವಾದ ಹಾಗೂ ಸಹಕಾರ ದೊರೆಯಲಿ ಎಂಬುದು ಅವರ ಹಾರೈಕೆ.
ಈ ಅವಕಾಶವನ್ನು ಕಲ್ಪಿಸಿದ ಜಿಲ್ಲಾ ಸಹಕಾರಿ ಕ್ಷೇತ್ರದ ಎಲ್ಲಾ ನಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು.
ವರದಿ: ರಾಜು ಮುಂಡೆ




