ಸೇಡಂ: ಕೆಲ ದಿನಗಳ ಹಿಂದೆ ತೋಲಮಮಿಡಿ ಗ್ರಾಮಕ್ಕೆ ಮಧ್ಯಾಹ್ನ ಸಮಯದಲ್ಲಿ ಬಸ್ ವ್ಯವಸ್ಥೆ ಇರುವುದಿಲ್ಲ. ದಿನ ನಿತ್ಯ ಸಾರ್ವಜನಿಕರು ವಿದ್ಯಾರ್ಥಿಗಳು ಮುಂಜಾನೆ ಹೋಗಿ ಸಾಯಂಕಾಲ ಬರುವಂತೆ ಆಗಿತ್ತು. ಈ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಅಂಬೇಡ್ಕರ್ ಯುವ ಸೇನೆ, ಮುಧೋಳ್ ವಲಯ ಘಟಕ ವತಿಯಿಂದ ಮನವಿ ಸಲ್ಲಿಸಲಾಗಿತ್ತು ಈ ಕುರಿತು ನಮ್ಮ ಭಾರತ ವೈಭವ ವರದಿ ಮಾಡಲಾಗಿತ್ತು.
ಆ ಮನವಿಗೆ ಸ್ಪಂದಿಸಿ ಸೇಡಂ ತಾಲೂಕಿನ ತೋಲಮಮಿಡಿ ಗ್ರಾಮಕ್ಕೆ ಮಧ್ಯಾಹ್ನ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.
ಈ ವ್ಯವಸ್ಥೆ ಮಾಡಿಸಿದ ಗುರುಮಿಠಕಲ್ ವಿಭಾಗದ ಮ್ಯಾನೇಜರ್ (ಡಿ.ಎಂ) ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿ ಊರಿಗೆ ಬಸ್ ಬಂದ ಸಂದರ್ಭದಲ್ಲಿ ಚಾಲಕರು ಹಾಗೂ ಕಂಡಕ್ಟರ್ರಿಗೆ ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ನರೇಶ್ ಎ ನಾಟೀಕಾರ್, ಲಾಲಪ್ಪ ತಲಾರಿ, ಅಧ್ಯಕ್ಷರು ಡಿ,ಎಸ್,ಎಸ್ ಗುರುಮಿಠಕಲ್ ಶ್ರೀಕಾಂತ್ ತಲಾರಿ ಅಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಗುರುಮಿಠಕಲ್, ಗುರುನಾಥ್, ಅಶೋಕ್, ಕೆ,ಕೆ,ಆರ್,ಟಿ,ಸಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




