Ad imageAd image

ಮಹಾತ್ಮಾ ಗಾಂಧೀಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ನ್ಯಾಯಾಧೀಶೆ ಭಾರತೀ ಎo

Bharath Vaibhav
ಮಹಾತ್ಮಾ ಗಾಂಧೀಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ನ್ಯಾಯಾಧೀಶೆ ಭಾರತೀ ಎo
WhatsApp Group Join Now
Telegram Group Join Now

ಬಾಗೇಪಲ್ಲಿ: ‘ಸತ್ಯ ಮತ್ತು ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯ ಎಂಬುದು ಗಾಂಧೀಜಿಯವರ ಅಹಿಂಸಾ ಚಳವಳಿಯಿಂದ ಇಡೀ ಪ್ರಪಂಚಕ್ಕೆ ತಿಳಿದಿದೆ.
ಆದ್ದರಿಂದ ಗಾಂಧಿ ಅವರ ಜೀವನ ತತ್ವಗಳನ್ನು ಅನುಸರಿಸಿದರೆ ದೇಶದ ಅಗಾಧ ಪ್ರಗತಿ ಸಾಧ್ಯವಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಧೀಶೆ ಭಾರತೀ ಎo ಹೇಳಿದರು.

ಬಾಗೇಪಲ್ಲಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ವಾಲ್ಮೀಕಿ ಜಯಂತಿ ಅಂಗವಾಗಿ ಅಂಗವಾಗಿ ಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಶಾಸ್ತ್ರಿ ಮತ್ತು ವಾಲ್ಮೀಕಿ ಅವರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಮಾತನಾಡಿದರು.

ದೇಶ ಕಂಡ ಮಹಾತ್ಮ ಗಾಂಧೀಜಿಯವರು ಅವರ ಅನೇಕ ಆದರ್ಶಗಳನ್ನ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ ಉತ್ತಮವಾದಂತಹ ಜೀವನವನ್ನು ನಡೆಸಬಹುದು ಎಂದು ತಿಳಿಸಿದರು.

ಅವರು ಸತ್ಯ ಅಹಿಂಸೆ ತತ್ವದ ಮೂಲಕವೇ ದೇಶಕ್ಕೆ ಸ್ವತಂತ್ರವನ್ನು ತಂದು ಕೊಟ್ಟಂತಹ ಮಹಾನ್ ಜ್ಞಾನಿ, ವಕೀಲರಾಗಿಯು ಸಹ ಅನೇಕ ಹೋರಾಟಗಳನ್ನ ದೇಶದ ಸ್ವತಂತ್ರಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಅಂತಹ ಮಹಾತ್ಮ ಗಾಂಧೀಜಿಯವರನ್ನು ನಾವು ಪ್ರತಿದಿನ ನೆನೆಸಿಕೊಳ್ಳಬೇಕು ಎಂದರು.

ಲಾಲ್ ಬಹುದ್ದೂರ್ ಶಾಸ್ತ್ರಿ ದೇಶದ ಪ್ರಧಾನಿಯಾಗಿ ಅನೇಕ ಸೇವೆಗಳನ್ನ ಜನರಿಗಾಗಿ ಸಾರ್ವಜನಿಕಾಗಿ ನೀಡಿದ್ದಾರೆ ಅವರು ಪ್ರತಿ ದಿನ ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯ ವಾಕ್ಯದೊಂದಿಗೆ ಮತ್ತು ಸರ್ಕಾರದ ಯಾವುದೇ ಹಣವನ್ನು ಸ್ವಂತಕ್ಕೆ ಖರ್ಚು ಮಾಡುತ್ತಿಲ್ಲ ಅಂತಹ ವ್ಯಕ್ತಿಗಳು ಸಹ ನಮಗೆ ಆದರ್ಶಪ್ರಾಯ ಆದ್ದರಿಂದ ಅವರನ್ನು ನಾವು ನೆನೆಸಿಕೊಳ್ಳಬೇಕು ಎಂದರು.
ಈ ರೀತಿಯಾಗಿ ವಾಲ್ಮೀಕಿ ರವರು ಸಹ ಮಹಾನ್ ಜ್ಞಾನಿಯಾಗಿ ರಾಮಾಯಣವನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಮೊದಲಿಗೆ ರತ್ನಾಕರ ಎಂಬ ಹೆಸರಿನಿಂದ ದರೋಡೆ,ಕಳ್ಳತನ, ಸುಳ್ಳಿಗೆ ಮಾಡುತ್ತಿದ್ದ ರತ್ನಾಕರ ತನ್ನ ಪಾಪಪ್ರಜ್ಞೆಯಿಂದ ಜ್ಞಾನವಂತನಾಗಿ ಈ ದೇಶಕ್ಕೆ ತಮ್ಮದೇ ಆಗಿರತಕ್ಕಂತ ರಾಮಾಯಣವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಂಥವರನ್ನು ನಾವು ನೆನೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜೆ ಏನ್ ಮಂಜುನಾಥ್ ಮಾತನಾಡಿ
ಈ ತ್ರಿಮೂರ್ತಿಗಳು ದೇಶ ಕಂಡ ಮಹಾನ್ ಜ್ಞಾನಿಗಳು ಇಂತಹ ಜ್ಞಾನವಂತರ ಆದರ್ಶಗಳನ್ನ ಹಿಂದಿನ ಯುವ ಪೀಳಿಗೆ ವಕೀಲರು ನಾವುಗಳು ಪ್ರತಿದಿನ ಸ್ಮರಿಸಿಕೊಳ್ಳಬೇಕು ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ರವಿ, ಕಾರ್ಯದರ್ಶಿ ಜಯಪ್ಪ, ಖಜಾಂಚಿ ಬಿಂದುಕುಮಾರಿ, ಹಿರಿಯ ವಕೀಲರಾದ ಕರುಣಾಸಾಗರೆಡ್ಡಿ, ಜೆಎನ್ ನಂಜಪ್ಪ, ಅಲ್ಲಭಕಾಶ್, ಸತ್ಯನಾರಾಯಣರಾವ್ ಫಯಾಜ್ ಬಾಷಾ, ವಿ ನಾರಾಯಣ, ಎಂ ಬಿ ಗುರುನಾಥ್, ಶ್ರೀ ವೆಂಕಟೇಶ್, ಆರ್ ಚಂದ್ರಶೇಖರ್, ಮಾಜಿ ಅಧ್ಯಕ್ಷ ಎನ್ಂಜುಂಡಪ್ಪ, ಮುಸ್ತಾಕ್ ಅಹಮದ್, ಮಂಜುನಾಥ ಎ, ಮಂಜುನಾಥ ಕೆ, ಟಿಎಲ್ ರಾಮಾಂಜನೇಯ, ಸಿವಿ ನರೇಂದ್ರಬಾಬು, ಡಿವಿ ಸತೀಶ, ಸುಧಾಕರ, ಪಿಎನ್ ಮಂಜುನಾಥ, ನಾಗಭೂಷಣ, ಬಾಲು ನಾಯ್ಕ, ಬಾಬು, ಸುಹೇಲ್ ಅಹಮದ್, ಶ್ರೀನಿವಾಸ,ಆನಂದ,ಶ್ರೀನಾಥ್,, ಸತೀಶ, ನರಸಿಂಹಮೂರ್ತಿ, ಇತರ ವಕೀಲರು ನ್ಯಾಯಾಲಯದ ಸಿಬ್ಬಂದಿ ಪೊಲೀಸರು ಹಾಜರಿದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!